ADVERTISEMENT

‘ಸಲಿಂಗ ಕಾಮ ಎನ್ನಬೇಡಿ, ಸಲಿಂಗ ಜೀವ ಎನ್ನಿ’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST

ಬೆಂಗಳೂರು: ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಸಲಿಂಗಿಗಳಿಗೆ ಸಂಬಂಧಿಸಿದ ಸೆಕ್ಷನ್‌ 377 ತೆಗೆದು ಹಾಕಬೇಕು. ಹಾಗೂ ‘ಸಲಿಂಗ ಕಾಮ’ ಶಬ್ದವನ್ನು ‘ಸಲಿಂಗ ಜೀವ’ ಎಂದು ಬದಲಾಯಿಸಬೇಕು ಎಂದು ‘ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದ ನಿರ್ದೇಶಕ ಟೇಶಿ ವೆಂಕಟೇಶ್‌ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಲಿಂಗ ಜೀವಿಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ. 158 ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಲೇ ಇದ್ದಾರೆ. ಐಪಿಸಿ ಸೆಕ್ಷನ್‌ 377ರ ಬಗ್ಗೆ ಕೇಂದ್ರ ಸರ್ಕಾರ ಒಂದು ವಾರದ ಒಳಗೆ ನಿಲುವು ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದರಿಂದ ಈ ಹೋರಾಟಕ್ಕೆ ಶಕ್ತಿ ಸಿಕ್ಕಂತಾಗಿದೆ’ ಎಂದರು.

ಚಿತ್ರದ ನಿರ್ಮಾಪಕ ಎಸ್‌.ವೆಂಕಟೇಶ್‌, ‘ಸಲಿಂಗ ಜೀವಿಗಳು ಕತ್ತಲ ಪ್ರಪಂಚದಲ್ಲಿ ಬದುಕುತ್ತಿದ್ದಾರೆ. ಅವರ ಬದುಕಿನ ಆಯಾಮವನ್ನು ‘ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದಲ್ಲಿ ತೋರಿಸಲಾಗಿದೆ. ಸಲಿಂಗ ಜೀವಿಗಳನ್ನು ನಮ್ಮಂತೆಯೇ ಪರಿಗಣಿಸಬೇಕು ಎನ್ನುವ ಸಂದೇಶವನ್ನು ಚಿತ್ರದಲ್ಲಿ ಕೊಟ್ಟಿದ್ದೇವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.