ADVERTISEMENT

ಸವಿತಾ ಸಾವು: ಯುವ ಕಾಂಗ್ರೆಸ್‌ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 18:50 IST
Last Updated 16 ನವೆಂಬರ್ 2012, 18:50 IST

ಬೆಂಗಳೂರು:  `ಜೀವ ರಕ್ಷಕ ಕಾನೂನು ಮತ್ತು ಧರ್ಮದ ಹೆಸರಿನಲ್ಲಿ ಐರ‌್ಲೆಂಡ್ ವೈದ್ಯರು ಭಾರತೀಯ ಮೂಲದ ಡಾ.ಸವಿತಾ ಹಾಲಪ್ಪನವರ ಅವರನ್ನು ಕೊಲೆ ಮಾಡಿದ್ದಾರೆ~ ಎಂದು ಆರೋಪಿಸಿ ಯುವ ಕಾಂಗ್ರೆಸ್ ಸದಸ್ಯರು ನಗರದ ಆನಂದ್‌ರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ನೆ.ಲ.ನರೇಂದ್ರಬಾಬು, `ಕ್ಯಾಥೋಲಿಕರಲ್ಲಿ ಗರ್ಭಪಾತವು ಧರ್ಮ ವಿರೋಧಿ ಕಾರ್ಯ ಎಂದು ಹೇಳಲಾಗುತ್ತದೆ. ಆದರೆ ಈ ಕಾರಣ ನೀಡಿ ಭಾರತೀಯ ಮೂಲದ ಹಿಂದೂ ಮಹಿಳೆಯ ಜೀವಕ್ಕೆ ಅಪಾಯವಿದ್ದ ಸಂದರ್ಭದಲ್ಲೂ ಗರ್ಭಪಾತಕ್ಕೆ ಅವಕಾಶ ಮಾಡಿಕೊಡದೇ ಐರ‌್ಲೆಂಡ್  ವೈದ್ಯರು ಅಮಾನವೀಯತೆ ಪ್ರದರ್ಶಿಸಿದ್ದಾರೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.