ADVERTISEMENT

ಸಿಇಟಿ: ತಪಸ್‌ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 19:30 IST
Last Updated 1 ಜೂನ್ 2017, 19:30 IST
ಶಾಶ್ವತ್‌ ಭಂಡಾರಿ
ಶಾಶ್ವತ್‌ ಭಂಡಾರಿ   

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ ಮತ್ತು ಬೇಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ‘ತಪಸ್‌’ ಶಿಕ್ಷಣ ಯೋಜನೆ­ಯಲ್ಲಿ ತರಬೇತಿ ಪಡೆದ ನಾಲ್ವರು ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಉತ್ತಮ ರ್ಯಾಂಕ್‌ ಗಳಿಸಿದ್ದಾರೆ.

ಇಲ್ಲಿ ತರಬೇತಿ ಪಡೆದ ದಕ್ಷಿಣ ಕನ್ನಡದ ಶಾಶ್ವತ್‌ ಬಂಡಾರಿ ಸಿಇಟಿಯಲ್ಲಿ 37ನೇರ್ಯಾಂಕ್‌ ಗಳಿಸಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 582 ಅಂಕಗಳನ್ನು ಪಡೆದಿದ್ದು, ರಸಾಯನ ವಿಜ್ಞಾನ, ಗಣಿತ ಹಾಗೂ ಭಾಷಾ ವಿಷಯದಲ್ಲಿ ಶೇ 100ರಷ್ಟು ಅಂಕಗಳಿಸಿದ್ದಾರೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ 185 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇದೇ ಸಂಸ್ಥೆಯ ಎಚ್‌. ಡಿ. ಬಸವರಾಜ್‌, ಅಂಜಿನಪ್ಪ, ಜಿ. ಆರ್‌. ಬಾಲಾಜಿ ಮೊದಲ 300 ರ್ಯಾಂಕ್‌ ಒಳಗೆ ಸ್ಥಾನ ಪಡೆದಿದ್ದಾರೆ.

ಉಚಿತ ವಸತಿ ಸಹಿತ ತರಬೇತಿ ಕಾರ್ಯ­ಕ್ರಮವಾದ ‘ತಪಸ್‌’ 2012ರಲ್ಲಿ ಪ್ರಾರಂಭಗೊಂಡಿದೆ. ಆರ್ಥಿಕವಾಗಿ ಹಿಂದುಳಿದ­ ಮಕ್ಕಳಿ­ಗಾಗಿ ಪಿಯು ಶಿಕ್ಷಣ ಹಾಗೂ ಐಐಟಿ ಪ್ರವೇಶ ಪರೀಕ್ಷೆಯ ತರಬೇತಿಯನ್ನು ಇಲ್ಲಿ ನೀಡ­­ಲಾಗು­ತ್ತಿದೆ.

ADVERTISEMENT

ಸಂಪರ್ಕಕ್ಕೆ: 94812 01144.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.