ADVERTISEMENT

ಸಿನಿಮಾ ಉದ್ಯಮದಲ್ಲಿ ಕೌಶಲ: ಕಮಲ್‌ ಹಾಸನ್‌ ಕರೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 19:59 IST
Last Updated 27 ಸೆಪ್ಟೆಂಬರ್ 2013, 19:59 IST
ನಗರದ ಐಐಎಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಖ್ಯಾತ ನಟ ಕಮಲ್‌ ಹಾಸನ್‌ ಮಾತನಾಡಿದರು	–ಪ್ರಜಾವಾಣಿ ಚಿತ್ರ
ನಗರದ ಐಐಎಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಖ್ಯಾತ ನಟ ಕಮಲ್‌ ಹಾಸನ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿನಿಮಾ ಉದ್ಯಮದಲ್ಲಿ ನಿಮ್ಮ ಜಾಣ್ಮೆ ಹಾಗೂ ಕೌಶಲವನ್ನು ತೋರಿಸಬೇಕು ಎಂದು ಭಾರತೀಯ ವ್ಯವಸ್ಥಾಪನ ಸಂಸ್ಥೆ (ಐಐಎಂಬಿ) ವಿದ್ಯಾರ್ಥಿಗಳಿಗೆ ಖ್ಯಾತ ನಟ ಕಮಲ್ ಹಾಸನ್ ಕರೆ ನೀಡಿದರು.

ಐಐಎಂಬಿಯಲ್ಲಿ ಶುಕ್ರವಾರ ಆರಂಭ ವಾದ ‘ವಿಸ್ತಾ’ ರಸಪ್ರಶ್ನೆ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾನು ಇಲ್ಲಿಗೆ ಬರಲು ವೈಯಕ್ತಿಕ ಕಾರಣವೂ ಇದೆ. ನಿಮ್ಮಂತಹ ಬುದ್ಧಿ ವಂತರ ಸೇವೆ ಸಿನಿಮಾ ಕ್ಷೇತ್ರಕ್ಕೆ ದೊರೆಯಬೇಕು. ಸಿನಿಮಾ ಕ್ಷೇತ್ರದಲ್ಲಿ ವೃತ್ತಿಪರ ವ್ಯವಸ್ಥಾಪಕರ ಕೊರತೆ ಇದೆ’ ಎಂದು ತಿಳಿಸಿದರು.

‘ಜನಸಾಮಾನ್ಯರಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತಪ್ಪು ಅಭಿಪ್ರಾಯಗಳಿವೆ. ಅಲ್ಲಿಯ ತಾರಾ ಜೀವನದ ಬಗೆಗೂ ಅಂತಹ ಕಲ್ಪನೆ ಗಳಿವೆ. ಆದರೆ, ಸಿನಿಮಾ ಕ್ಷೇತ್ರದ ಹೃದಯವೆಂದರೆ ಅದು ವ್ಯವಹಾರಕ್ಕೆ ಸಂಬಂಧಿಸಿದ್ದು. ಅದರ ಮುಂದೆ ಮಿಕ್ಕೆ ಲ್ಲವೂ ಸಣ್ಣದೇ. ಹೀಗಾಗಿ ವ್ಯವಸ್ಥಾಪಕ ರಿಗೆ ಅವಕಾಶಗಳು ಹೆಚ್ಚಿವೆ’ ಎಂದರು.

‘ಸಿನಿಮಾ ಕ್ಷೇತ್ರ ಈಗ ನೂರು ವರ್ಷದ ಸಂಭ್ರಮದಲ್ಲಿದೆ. ಆಗ ಈ ಕ್ಷೇತ್ರಕ್ಕೆ ಧುಮುಕಿದವರು ಉದ್ಯಮಿ ಗಳಾಗಿಯೇ. ಲಾಭ ಮಾಡುವುದೇ ಉದ್ದೇಶವಾಗಿತ್ತು. ಈ ಉದ್ಯಮದಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸಲು ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದರು. ಸಿನಿಮಾ ಉದ್ಯಮದ ಹಣಕಾಸು ನಿರ್ವಹಣೆ ಇನ್ನಷ್ಟು ವೃತ್ತಿಪರ ವಾಗಬೇಕು’ ಎಂದು ತಿಳಿಸಿದರು.

‘ತಂತ್ರಜ್ಞಾನದ ಪ್ರಯೋಜನ ಪಡೆದು ನಾನು ವಿಶ್ವರೂಪಂ ಸಿನಿಮಾವನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡಿದೆ. ಇದರಿಂದಾಗಿ ಥಿಯೇಟರ್‌ಗೆ ಹೋಗಲು ಸಾಧ್ಯವಿರ ದವರು ಮನೆಯಲ್ಲಿಯೇ ಚಿತ್ರವನ್ನು ನೋಡಲು ಸಾಧ್ಯವಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.