ADVERTISEMENT

ಸಿನಿಮಾ ವಿತರಕರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 18:30 IST
Last Updated 6 ಫೆಬ್ರುವರಿ 2012, 18:30 IST

ಬೆಂಗಳೂರು: ಸಿನಿಮಾ ವಿತರಕರೊಬ್ಬರ ವಿರುದ್ಧ ನಿರ್ಮಾಪಕ ಬಿ.ಆರ್.ಕೇಶವ್ ಅವರು ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಕೇಶವ್ ಅವರು ಅರುಂದತಿ ಎಂಬ ಕನ್ನಡ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದರು.  ಈ ಚಿತ್ರವನ್ನು ಟವಿಯಲ್ಲಿ ಪ್ರಸಾರ ಮಾಡುವ ಹಕ್ಕನ್ನು ಆರ್.ಎಸ್.ಗೌಡ ಅವರು ಪಡೆದಿದ್ದರು. ಅದಕ್ಕಾಗಿ ಕೇಶವ್ ಅವರಿಗೆ 17 ಲಕ್ಷ ಹಣ ನೀಡಿದ್ದರು. ಚಿತ್ರವನ್ನು ಬಿಡುಗಡೆ ಮಾಡದೆ ಇದ್ದ ಕಾರಣ ಇಬ್ಬರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು.

ಇಂದು ಕಂಠೀರವ ಸ್ಟುಡಿಯೋದ ಪ್ರಸಾದ್ ಲ್ಯಾಬೋರೇಟರಿಯಲ್ಲಿ ಆಕಸ್ಮಿಕವಾಗಿ ಭೇಟಿಯಾದ ಇಬ್ಬರ ನಡುವೆ ಜಗಳ ನಡೆದಿದ್ದು, ಗೌಡ ಅವರು ಕೇಶವ್ ಅವರಿಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.