ADVERTISEMENT

ಸುಗಮ ಸಂಗೀತ ಚಿಂತನ ಮಂಥನ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜೂನ್ 5 (ಮಂಗಳವಾರ) ಬೆಳಿಗ್ಗೆ 9 ಗಂಟೆಗೆ ಸುಗಮ ಸಂಗೀತ ಚಿಂತನ ಮಂಥನ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಿದೆ.

 ವಿಚಾರ ಸಂಕಿರಣವನ್ನು ಹಿರಿಯ ಸಾಹಿತಿ ಜಿ.ಎಸ್.ಶಿವರುದ್ರಪ್ಪ ಉದ್ಘಾಟಿಸಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಗಾಯಕ ಶಿವಮೊಗ್ಗ ಸುಬ್ಬಣ್ಣ ಅತಿಥಿಗಳಾಗಿ ಆಗಮಿಸಲಿದ್ದು, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

 ಬೆಳಿಗ್ಗೆ 10.30ಕ್ಕೆ `ಸ್ವರ ಸಂಯೋಜನೆಯ ಅಂದು ಇಂದು~ ಬಗ್ಗೆ ಗಾಯಕರಾದ ಗರ್ತಿಗೆರೆ ರಾಘಣ್ಣ, ಇಂದು ವಿಶ್ವನಾಥ್, ಸೋಮಸುಂದರಂ, ಶ್ರೀಕಾಂತ್ ಕುಲಕರ್ಣಿ, ಎ.ಆರ್.ಅಚ್ಯುತ್‌ಕುಮಾರ್ ವಿಷಯವನ್ನು ಮಂಡಿಸಲಿದ್ದು, ಎಚ್.ಆರ್.ಲೀಲಾವತಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಂತರ ಅತ್ಯುತ್ತಮ ಸಂಯೋಜಿತ ಗೀತೆಗಳನ್ನು ಗಾಯಕರಾದ ಡಾ.ರೋಹಿಣಿ ಮೋಹನ್, ನಗರ ಶ್ರೀನಿವಾಸ ಉಡುಪ, ಎಂ.ಡಿ.ಪಲ್ಲವಿ, ಕಿಕ್ಕೇರಿ ಕೃಷ್ಣಮೂರ್ತಿ ಅವರಿಂದ ಗೀತ ಗಾಯನ ನಡೆಯಲಿದೆ.

 ಮಧ್ಯಾಹ್ನ 12 ಕ್ಕೆ `ಗಾಯಕ ಗಾಯಕಿಯರ ಜವಾಬ್ದಾರಿ~ ಬಗ್ಗೆ ಗಾಯಕರಾದ ಬಿ.ಕೆ.ಸುಮಿತ್ರ, ಕಸ್ತೂರಿ ಶಂಕರ್, ರತ್ನಮಾಲಾ ಪ್ರಕಾಶ್, ಪುತ್ತೂರು ನರಸಿಂಹ ನಾಯಕ್, ಸುರೇಖ, ರಮೇಶ್‌ಚಂದ್ರ, ಅರ್ಚನಾ ಉಡುಪ  ವಿಷಯವನ್ನು ಮಂಡಿಸಲಿದ್ದು, ಬಿ.ಕೆ ಸುಮಿತ್ರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮಧ್ಯಾಹ್ನ 3ಕ್ಕೆ `ವಾದ್ಯ ಸಂಗೀತದ ಪಾತ್ರ~ ಬಗ್ಗೆ ಗಾಯಕರಾದ ಎನ್.ಎಸ್. ಪ್ರಸಾದ್, ಎಸ್.ಬಾಲಿ, ಪ್ರವೀಣ ಡಿ. ರಾವ್, ಬಿ.ವಿ.ರಾಧಾಕೃಷ್ಣ, ಮಹೇಶ್ ವಿಷಯವನ್ನು ಮಂಡಿಸಲಿದ್ದು, ಡಿ. ದೇವನ್ಬು ಅಧ್ಯಕ್ಷತೆ ಹಿಸಲಿದ್ದಾರೆ.

 ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಹಿರಿಯ ಗಾಯಕಿ ಶ್ಯಾಮಲಾ ಜಿ.ಭಾವೆ, ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಅವರು ಪಾಲ್ಗೊಳ್ಳಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.