ADVERTISEMENT

ಸೌದಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಆರೋಪಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಲಕ್ಕಿ ಸಿಂಗ್
ಲಕ್ಕಿ ಸಿಂಗ್   

ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಬಂದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ, ಅಲ್ಲಿಯ ಕೆಲಸಗಾರ ಲಕ್ಕಿ ಸಿಂಗ್ (29) ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಲಕ್ಕಿ ಸಿಂಗ್‌ ಮತ್ತಿಕೆರೆಯ ಎಂ.ಎಸ್‌.ಆರ್. ನಗರದ ‘ಜಾವೀದ್ ಹಬೀಬ್ ಬ್ಯೂಟಿ ಪಾರ್ರ್‌’ನಲ್ಲಿ ಕೆಲಸ ಮಾಡುತ್ತಿದ್ದ.

ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ನಗರಕ್ಕೆ ಬಂದಿದ್ದ ಸೌದಿ ಅರೇಬಿಯಾದ 19 ವರ್ಷದ ಯುವತಿ   ಮಾರ್ಚ್‌ 21ರ ರಾತ್ರಿ 8 ಗಂಟೆ ಸುಮಾರಿಗೆ ಈ ಪಾರ್ಲರ್‌ಗೆ ಹೋಗಿದ್ದರು.  ಲಕ್ಕಿ ಸಿಂಗ್‌, ‘ಮಹಿಳಾ ಸಿಬ್ಬಂದಿ ಬೇರೊಬ್ಬ ಗ್ರಾಹಕರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ, ನಾನೇ ಫೇಶಿಯಲ್ ಮಾಡುತ್ತೇನೆ’ ಎಂದು ಹೇಳಿದ್ದ.

ADVERTISEMENT

ತುರ್ತಾಗಿ ಹೊರಡಬೇಕಿದ್ದ ಯುವತಿ ಇದಕ್ಕೆ ಅನಿವಾರ್ಯವಾಗಿ ಒಪ್ಪಿದ್ದರು’ ಎಂದು ಯಶವಂತಪುರ ಪೊಲೀಸರು ತಿಳಿಸಿದರು.

ಆರೋಪಿ ಯುವತಿಯ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಆತಂಕಗೊಂಡ ವಿದ್ಯಾರ್ಥಿನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಳು. ವಸತಿನಿಲಯಕ್ಕೆ ಹಿಂದಿರುಗಿ ಕೃತ್ಯದ ಬಗ್ಗೆ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದರು. ಬಳಿಕ ಅದೇ ದಿನ ರಾತ್ರಿ ಠಾಣೆಗೆ ಬಂದು ದೂರು ಕೊಟ್ಟಿದ್ದಾಳೆ ಎಂದರು.

‘ಬಿಟಿಎಂ ಲೇಔಟ್‌ನ ಪರಿಚಯಸ್ಥರ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆ ಸೆಕ್ಷನ್ 354 ಎ (ಲೈಂಗಿಕ ದೌರ್ಜನ್ಯ) ಅಡಿ ಪ್ರಕರಣ ದಾಖಲಿಸಿದ್ದೇವೆ. ಆರೊಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಪಾರ್ಲರ್‌ನ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.