ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕ ವಿತರಣೆ

ಲಯನ್ಸ್‌ ಕ್ಲಬ್ ಆಫ್‌ ವೀರ ಹೊಯ್ಸಳ ಘಟಕದ ಸೇವೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 19:30 IST
Last Updated 15 ಆಗಸ್ಟ್ 2016, 19:30 IST
ನಗರದ ಲಯನ್ಸ್‌ ಕ್ಲಬ್ ಆಫ್‌ ವೀರ ಹೊಯ್ಸಳ  ಘಟಕದ  ಅಧ್ಯಕ್ಷ ಬಿ.ಎನ್.ಜಗದೀಶ್‌ ಅವರು ಸ್ವಾತಂತ್ರ್ಯ ಹೋರಾಟಗಾರರ  ಕುರಿತ   ಪುಸ್ತಕಗಳನ್ನು  ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ  ಉಚಿತವಾಗಿ ಹಂಚಿದರು.
ನಗರದ ಲಯನ್ಸ್‌ ಕ್ಲಬ್ ಆಫ್‌ ವೀರ ಹೊಯ್ಸಳ ಘಟಕದ ಅಧ್ಯಕ್ಷ ಬಿ.ಎನ್.ಜಗದೀಶ್‌ ಅವರು ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪುಸ್ತಕಗಳನ್ನು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಹಂಚಿದರು.   

ಬೆಂಗಳೂರು: ನಗರದ ಲಯನ್ಸ್‌ ಕ್ಲಬ್ ಆಫ್‌ ವೀರ ಹೊಯ್ಸಳ ಘಟಕದ ವತಿಯಿಂದ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಸೋಮವಾರ ಸಾರ್ವಜನಿಕರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನೀಯರ ಕುರಿತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಮಹಾತ್ಮ ಗಾಂಧೀಜಿ, ಜವಹರ ಲಾಲ್‌ ನೆಹರು, ಸುಭಾಷ್‌ಚಂದ್ರ ಬೋಸ್‌, ಸಂಗೊಳ್ಳಿ ರಾಯಣ್ಣ, ಮೇಘನಾದ ಸಹಾ, ಕಿತ್ತೂರು ರಾಣಿ ಚೆನ್ನಮ್ಮ, ಭಗತ್‌ ಸಿಂಗ್‌, ಉಳ್ಳಾಲದ ರಾಣಿ ಅಬ್ಬಕ್ಕ, ಡಾ.ಬಿ.ಆರ್‌ ಅಂಬೇಡ್ಕರ್‌ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ದಾಸರಹಳ್ಳಿಯ ಹೆಸರಘಟ್ಟ ರಸ್ತೆಯ ಬಾಗಲಗುಂಟೆ ವೃತ್ತದಲ್ಲಿ ವಿತರಿಸಲಾಯಿತು.

‘ಸ್ವಾತಂತ್ರ್ಯ ಯೋಧರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹೊಸ ಪ್ರಯತ್ನ ಮಾಡಿದ್ದೇವೆ. ಶಾಲಾ–ಕಾಲೇಜು
ವಿದ್ಯಾರ್ಥಿಗಳಿಗೆ ಹಾಗೂ ಖಾಸಗಿ ಕಂಪೆನಿಗಳ ಸಿಬ್ಬಂದಿಗೂ ಪುಸ್ತಕ ವಿತರಿಸುವ ಯೋಚನೆ ಇದೆ’ ಎಂದು ಲಯನ್ಸ್‌ ಕ್ಲಬ್ ಅಧ್ಯಕ್ಷ ಬಿ.ಎನ್‌.ಜಗದೀಶ್‌  ತಿಳಿಸಿದರು. ಕ್ಲಬ್‌ನ  ಪದಾಧಿಕಾರಿಗಳಾದ ತಿಮ್ಮರಾಜು, ಸತೀಶ, ವಿನಯ್‌ ಭಾರದ್ವಾಜ್‌, ಮಧು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.