ADVERTISEMENT

ಹಕ್ಕುಗಳನ್ನು ಪಡೆಯಲು ಮುಂದಾಗಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 19:30 IST
Last Updated 17 ಏಪ್ರಿಲ್ 2012, 19:30 IST

ಪೀಣ್ಯ ದಾಸರಹಳ್ಳಿ: `ಹಕ್ಕುಗಳು ಯಾರೊಬ್ಬರ ಸ್ವತ್ತಲ್ಲ; ಶೋಷಿತರು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.
ಪೀಣ್ಯದ ಆಶ್ರಯನಗರದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ 121ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

`ಹೋರಾಟಗಳನ್ನು ಮುಂದಿನ ರಾಜಕಾರಣದ ದೃಷ್ಟಿ ಇಟ್ಟುಕೊಂಡು ಮಾಡಬಾರದು. ದಲಿತ ಸಮಾಜದ ಏಳಿಗೆಗಾಗಿ ಹೋರಾಟಗಳನ್ನು ರೂಪಿಸಿ. ನಿಮ್ಮ ಕೂಗು ಸಂಸತ್, ವಿಧಾನ ಸೌಧ ಮುಟ್ಟುವಂತಾಗಲಿ~ ಎಂದು ಅವರು ಹೇಳಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ನರಸಿಂಹಯ್ಯ, ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು, ಮುಖಂಡರಾದ ದಾಸಪ್ಪ, ಗಂಗನರಸಣ್ಣ, ರಾಮಕೃಷ್ಣಯ್ಯ, ಲಿಂಗರಾಜು, ವೀರೇಶ್ ಬಳ್ಳಾರಿ, ಕೆ.ಬಾಲಕೃಷ್ಣ, ನಾಗರಾಜಣ್ಣ, ಪಿಳ್ಳಾರೆಡ್ಡಿ, ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷೆ ರತ್ನಮ್ಮ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.