ADVERTISEMENT

ಹಕ್ಕುಪತ್ರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಮಹದೇವಪುರ:  `2003- 04ರ ಸಾಲಿನಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ನಗರಾಶ್ರಯ ಯೋಜನೆ ಅಡಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಹಕ್ಕುಪತ್ರ ವಿತರಿಸಲು ಗ್ರಾಮ ಪಂಚಾಯಿತಿ ಸತಾಯಿಸುತ್ತಿದೆ~ ಎಂದು ಹಕ್ಕುಪತ್ರ ವಂಚಿತ ಕಡು ಬಡವರು ಚಿಕ್ಕನಾಯಕನಹಳ್ಳಿ ದಿನ್ನೆಯಲ್ಲಿ  ನಡೆದ ಹಾಲನಾಯಕನಹಳ್ಳಿ ಪಂಚಾಯಿತಿ ಸಭೆಯಲ್ಲಿ ಆರೋಪಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ನಿವೇಶನ ಹಂಚಿಕೆ ಆದಂತಹ ಫಲಾನುಭವಿಗಳು ತಮ್ಮ ಭಾವಚಿತ್ರ ಹಾಗೂ ವಂತಿಗೆ ಹಣ ಪಾವತಿಸಿ ಹಕ್ಕುಪತ್ರ ಪಡೆಯಬಹುದು, ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಸಮಾಧಾನಪಡಿಸಿದರು.

ಈ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಡ ಫಲಾನುಭವಿಗಳಿಂದ ಯಾವುದೇ ರೀತಿಯಿಂದ ಲಂಚವಾಗಲೀ, ಹೆಚ್ಚುವರಿ ಹಣ ಪಡೆಯಬಾರದು ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.