ಬೆಂಗಳೂರು: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಹೆಸರಘಟ್ಟ ಕೇಂದ್ರ ಕುಕ್ಕುಟ ಅಭಿವೃದ್ಧಿ ಮಂಡಳಿ ಆವರಣದ ಶಾಲೆಯನ್ನು ನ. 16ರಿಂದ ಪುನರಾರಂಭ ಮಾಡಲಾಗುತ್ತದೆ.
ಇಲ್ಲಿಯ ಫಾರ್ಮ್‌ನಲ್ಲಿದ್ದ ಎಲ್ಲ ಕೋಳಿಗಳನ್ನು ಕೇಂದ್ರ ಸರ್ಕಾರದ ಕ್ರಿಯಾ ಯೋಜನೆಯಂತೆ ನಾಶಪಡಿಸಲಾಗಿದೆ. ಕೋಳಿ ಮನೆ ಮತ್ತು ಆವರಣವನ್ನು ಶುಚಿಗೊಳಿಸಿ ನಂಜು ನಿವಾರಕವನ್ನು ಸಿಂಪಡಣೆ ಮಾಡಲಾಗಿದೆ.
ಫಾರ್ಮ್‌ನಲ್ಲಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ಮಂಗಳವಾರ ನೈರ್ಮಲ್ಯ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಫಾರ್ಮ್‌ನಲ್ಲಿ ಸ್ವಚ್ಛತಾ ಕಾಮಗಾರಿ ನಂತರದ ಕಣ್ಗಾವಲು ಕಾರ್ಯವನ್ನೂ ಆರಂಭಿಸಲಾಗಿದೆ.
ಹಕ್ಕಿ ಜ್ವರ ಕಾಣಿಸಿಕೊಂಡಾಗ ಹೆಸರಘಟ್ಟ ಫಾರ್ಮ್‌ನಲ್ಲಿ ಸಾವಿರಾರು ಕೋಳಿಗಳು ಸಾವನ್ನಪ್ಪಿದ್ದವು. ಹೀಗಾಗಿ ಇದೇ ಆವರಣದಲ್ಲಿದ್ದ ಶಾಲೆಯನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.