ADVERTISEMENT

ಹೊಸ ಮಾರ್ಗಗಳಲ್ಲಿ ವೋಲ್ವೊ,ಕರೋನ ಬಸ್‌ಗಳ ಸೇವೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಮಾರ್ಗಗಳಲ್ಲಿ ಹೊಸ ವೋಲ್ವೊ ಹಾಗೂ ಕರೋನ ಬಸ್‌ಗಳ ಸೇವೆಯನ್ನು ಪ್ರಾರಂಭಿಸಿದೆ.

ಶಿವಾಜಿನಗರ- ಬನ್ನೇರುಘಟ್ಟ ಉದ್ಯಾನ: ಶಿವಾಜಿನಗರ ಬಸ್ ನಿಲ್ದಾಣದಿಂದ ಮೆಯೋಹಾಲ್, ಮೈಕೊ ಫ್ಯಾಕ್ಟರಿ ಜಂಕ್ಷನ್, ಡೇರಿ ವೃತ್ತ, ಬಿಳೇಕಹಳ್ಳಿ, ಗೊಟ್ಟಿಗೆರೆ ಮಾರ್ಗವಾಗಿ ಹೊಸ ವೋಲ್ವೊ ಬಸ್ (ಮಾರ್ಗ ಸಂಖ್ಯೆ: ಎಸಿ-4) ಸೇವೆಯನ್ನು ಪ್ರತಿ 30 ನಿಮಿಷಕ್ಕೊಂದರಂತೆ ಸಾಮಾನ್ಯ ಪಾಳಿಯಲ್ಲಿ ಪ್ರಾರಂಭಿಸಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ: ಕೆಂಪೇಗೌಡ ಬಸ್ ನಿಲ್ದಾಣದಿಂದ ಜಯನಗರ 4 ನೇ ಬ್ಲಾಕ್, ಕಾರ್ಮೆಲ್ ಕಾನ್ವೆಂಟ್, ಜಯದೇವ ಆಸ್ಪತ್ರೆ, ಗೊಟ್ಟಿಗೆರೆ ಮಾರ್ಗವಾಗಿ (ಮಾರ್ಗ ಸಂಖ್ಯೆ: ವಿ-365ವಿ) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಸ ವೋಲ್ವೊ ಬಸ್ ಸೇವೆಯನ್ನು ಪ್ರತಿ 30 ನಿಮಿಷಕ್ಕೊಂದರಂತೆ ಸಾಮಾನ್ಯ ಪಾಳಿಯಲ್ಲಿ ಆರಂಭಿಸಲಾಗಿದೆ.

ಉಲ್ಲಾಳು ಉಪ ನಗರಕ್ಕೆ: ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಕಚೇರಿ ಮಾರ್ಗವಾಗಿ ಹೊಸ ಎಸಿ-ಕರೋನ (ಎಸಿ-ಸಿಆರ್‌ಎನ್-234ಇ) ಬಸ್ ಸೇವೆಯನ್ನು ಉಲ್ಲಾಳು ಉಪ ನಗರಕ್ಕೆ ಪ್ರತಿ 30 ನಿಮಿಷಕ್ಕೊಂದರಂತೆ ಸಾಮಾನ್ಯ ಪಾಳಿಯಲ್ಲಿ ಪ್ರಾರಂಭಿಸಲಾಗಿದೆ.

ಬಿಇಎಂಎಲ್ 5ನೇ ಹಂತಕ್ಕೆ: ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜರಾಜೇಶ್ವರಿ ದೇವಸ್ಥಾನದ ಮಾರ್ಗವಾಗಿ ಬಿಎಎಂಎಲ್ 5ನೇ ಹಂತಕ್ಕೆ ಪ್ರತಿ 15 ನಿಮಿಷಕ್ಕೊಂದರಂತೆ ಸಾಮಾನ್ಯ ಪಾಳಿಯಲ್ಲಿ ಹೊಸ ಎಸಿ-ಕರೋನ ಬಸ್ ಸೇವೆ (ಮಾರ್ಗ ಸಂಖ್ಯೆ: ಎಸಿ-ಸಿಆರ್‌ಎನ್-225ಸಿ)ಯನ್ನು ಆರಂಭಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.