ADVERTISEMENT

`ಹೋಮ್ ಲ್ಯಾಂಡ್ಸ್' ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:53 IST
Last Updated 6 ಜುಲೈ 2013, 19:53 IST

ಬೆಂಗಳೂರು: `ಹೋಮ್ ಲ್ಯಾಂಡ್ಸ್ (ತಾಯಿನಾಡು) ಕಲಾ ಪ್ರದರ್ಶನದಲ್ಲಿ 21ನೇ ಶತಮಾನದ ಸಾಂಸ್ಕೃತಿಕ ಸಂಬಂಧಗಳ ಆಂತರ್ಯ ಅನಾವರಣಗೊಂಡಿದೆ. ಇಲ್ಲಿರುವ ಕಲಾಕೃತಿಗಳ ಮೂಲಕ ಜಗತ್ತಿನಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಅರಿತುಕೊಳ್ಳಬಹುದು ಹಾಗೂ ನಮ್ಮ ಬಗ್ಗೆ ಕಲಿಕೆಗೆ ಈ ಕಲಾಕೃತಿಗಳು ನೆರವಾಗಲಿವೆ' ಎಂದು ಬ್ರಿಟಿಷ್ ಕೌನ್ಸಿಲ್ ಇಂಡಿಯಾ ನಿರ್ದೇಶಕ ರಾಬ್ ಲೈನ್ಸ್ ಅಭಿಪ್ರಾಯಪಟ್ಟರು.

ಬ್ರಿಟಿಷ್ ಕೌನ್ಸಿಲ್ ಇಂಡಿಯಾ ಆಶ್ರಯದಲ್ಲಿ ಲತಿಕಾ ಗುಪ್ತಾ ಸಂಯೋಜನೆಯಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ (ಎನ್‌ಜಿಎಂಎ) ಶುಕ್ರವಾರ ನಡೆದ ಅಂತರರಾಷ್ಟ್ರೀಯ ಮಟ್ಟದ 28ರ ಕಲಾವಿದರ ಚಿತ್ರ ಕಲಾಪ್ರದರ್ಶನ `ಹೋಮ್‌ಲ್ಯಾಂಡ್ಸ್' ಉದ್ಘಾಟಿಸಿ ಅವರು ಮಾತನಾಡಿದರು.

`ದೇಶಗಳ ನಡುವಿನ ಬಾಂಧವ್ಯವನ್ನು ಬೆಳೆಸಲು ಈ ವರ್ಷ ಹೋಮ್‌ಲ್ಯಾಂಡ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೆಹಲಿ, ಮುಂಬೈ ಹಾಗೂ ಕೋಲ್ಕತ್ತಾಗಳಲ್ಲಿ ಈಗಾಗಲೇ ಕಲಾಪ್ರದರ್ಶನ ನಡೆದಿದೆ. ಕಲಾವಿದೆ ಸೂಕಿಧಾಂದಾ, ಎನ್‌ಜಿಎಂಎ ಸಲಹಾ ಸಮಿತಿ ಅಧ್ಯಕ್ಷ ಸುಧಾಕರ ರಾವ್, ಅಧ್ಯಕ್ಷ ಕೆ.ಜಿ.ಕುಮಾರ್, ಲತಿಕಾ ಗುಪ್ತಾ ಮತ್ತಿತರರು ಹಾಜರಿದ್ದರು. ಕಲಾಪ್ರದರ್ಶನ ಇದೇ 14ರ ವರೆಗೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.