ADVERTISEMENT

‘ಆನ್‌ ಹಿಂದುಯಿಸಂ’ ಕೃತಿ ನಿಷೇಧಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 20:19 IST
Last Updated 10 ಮಾರ್ಚ್ 2014, 20:19 IST

ಬೆಂಗಳೂರು: ‘ಲೇಖಕಿ ವೆಂಡಿ ಡೊನಿಜರ್‌ ಅವರು ಬರೆದಿರುವ ‘ಆನ್‌ ಹಿಂದು­ಯಿಸಂ’ ಕೃತಿಯನ್ನು ಕೂಡಲೇ ನಿಷೇಧಿ­ಸಬೇಕು’ ಎಂದು ಶಿಕ್ಷಾ ಬಚಾವೋ ಆಂದೋಲನ ಸಮಿತಿಯ ದೀನಾನಾಥ ಬಾತ್ರ ಅವರು ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಅವರು, ‘ಈ ಕೃತಿಯಲ್ಲಿ ಹಿಂದುತ್ವದ ಕಾಮ ಸಂಬಂಧಿತ ಅಂಶ­ಗಳನ್ನು ಪ್ರಚೋದನ­ಕಾರಿಯಾಗಿ ಪ್ರಚುರ­ಪಡಿಸಿದ್ದಾರೆ.

ಅವರ ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಅಶ್ಲೀಲ ರೀತಿಯಲ್ಲಿ ಬಿಂಬಿಸಿದ್ದು, ಹಿಂದೂ ಧರ್ಮಕ್ಕೆ ಅವ­ಮಾನವಾಗುವ ರೀತಿ­ಯಲ್ಲಿ ಬಿಂಬಿ­ಸಲಾಗಿದೆ. ಇಲ್ಲವಾದರೆ, ಕಾನೂನಾತ್ಮಕ ಹೋರಾಟ ನಡೆಸ­ಲಾಗುವುದು’ ಎಂದು ದೀನಾನಾಥ ಬಾತ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.