ADVERTISEMENT

‘ಏಳಿಗೆಗೆ ಗುಣಮಟ್ಟದ ಶಿಕ್ಷಣ ಅಗತ್ಯ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:42 IST
Last Updated 17 ಸೆಪ್ಟೆಂಬರ್ 2013, 19:42 IST
ಕೇಂದ್ರೀಯ ವಿದ್ಯಾಲಯ ಸಂಘಟನೆಯ (ಕೆವಿಎಸ್‌) ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಪ್ರವಾಸಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿನಿಯರು ಕರಕುಶಲ ವಸ್ತುಗಳನ್ನು ವೀಕ್ಷಿಸಿದರು
ಕೇಂದ್ರೀಯ ವಿದ್ಯಾಲಯ ಸಂಘಟನೆಯ (ಕೆವಿಎಸ್‌) ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಪ್ರವಾಸಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕರಕುಶಲ ವಸ್ತುಗಳನ್ನು ವೀಕ್ಷಿಸಿದರು   

ಬೆಂಗಳೂರು: ‘ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆಯು (ಕೆವಿಎಸ್‌) ದೇಶದಾ ದ್ಯಂತ ಉತ್ತಮ ಕೆಲಸ ಮಾಡುತ್ತಿದೆ’ ಎಂದು ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಶ್ಲಾಘಿಸಿದರು.

ಕೇಂದ್ರೀಯ ವಿದ್ಯಾಲಯ ಸಂಘಟನೆಯ ಸುವರ್ಣ ಮಹೋತ್ಸ ವದ ಅಂಗವಾಗಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ‘ಪ್ರವಾಸಿ ಛಾಯಾಚಿತ್ರ ಪ್ರದರ್ಶನ’ ಕಾರ್ಯ ಕ್ರಮು ಉದ್ಘಾಟಿಸಿ ಮಾತ ನಾಡಿದರು.

ಕೇಂದ್ರದಲ್ಲಿ ಪಿ.ವಿ.ನರಸಿಂಹರಾವ್‌ ಶಿಕ್ಷಣ ಮಂತ್ರಿಗಳಾಗಿದ್ದಾಗ ದೇಶದಾ ದ್ಯಂತ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಲಾಯಿತು ಎಂದು ಹೇಳಿದರು.

ನವದೆಹಲಿಯ ಕೇಂದ್ರೀಯ ವಿದ್ಯಾ ಲಯದ ಜಂಟಿ ಆಯುಕ್ತ ಡಾ.ಇ. ಪ್ರಭಾಕರ್‌ ಮಾತನಾಡಿ, ಕೇವಲ 20 ವಿದ್ಯಾಲಯಗಳಿಂದ ಆರಂಭವಾದ ಕೇಂದ್ರೀಯ ವಿದ್ಯಾಲಯ ಸಂಘಟನೆ ಯು ದೇಶದಾದ್ಯಂತ 1,093 ವಿದ್ಯಾ ಲಯಗಳನ್ನು ಹೊಂದಿದೆ ಎಂದರು.

ಕೆವಿಎಸ್‌ನ ಬೆಳವಣಿಗೆಯನ್ನು ಸಾರುವ ಪ್ರವಾಸಿ ಛಾಯಾಚಿತ್ರ ಪ್ರದರ್ಶನವು ನವದೆಹಲಿ, ಜೈಪುರ, ಮುಂಬೈ ಸೇರಿದಂತೆ ವಿವಿಧ 14 ನಗರಗಳಲ್ಲಿ ನಡೆಯಲಿದೆ. ನಗರದ ವಿಮಾನಪುರದಲ್ಲಿರುವ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌), ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿರುವ ಪ್ರದರ್ಶನವು ಸೆಪ್ಟೆಂಬರ್‌ 25ರ ವರೆಗೆ ನಡೆಯಲಿದೆ ಎಂದರು.

ಜನರು ನಿರ್ಧರಿಸುತ್ತಾರೆ
‘ಅರ್ಹತೆ ಇರುವ ಯಾರು ಬೇಕಾದರೂ ದೇಶದ ಪ್ರಧಾನಿ  ಆಗಬಹುದು. ಮುಂದಿನ ಪ್ರಧಾನಿ  ಯಾರು ಆಗಬೇಕೆಂದು ದೇಶದ ಜನರು ನಿರ್ಧರಿಸಲಿದ್ದಾರೆ’ ಎಂದು ರಾಜ್ಯಪಾಲ ಎಚ್‌.ಆರ್. ಭಾರದ್ವಾಜ್‌ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.