ಬೆಂಗಳೂರು: ‘ಗಾಂಧೀಜಿ ಅವರನ್ನು ಕೇವಲ ಪಠ್ಯದಲ್ಲಿ ಓದಿದರೆ ಪ್ರಯೋಜನವಿಲ್ಲ. ಅವರ ಕುರಿತು ಹೆಚ್ಚು ಅಧ್ಯಯನ ನಡೆಸಿ ಅವರ ತತ್ವ, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಗಾಂಧಿವಾದಿ ಗೌತಮ್ ಬಜಾಜ್ ಹೇಳಿದರು.
ಶೇಷಾದ್ರಿಪುರ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ‘ಗಾಂಧಿ–ವಿನೋಬ’ ಗಾಂಧಿವಾದಿ ಮತ್ತು ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸದ್ಯದ ರಾಜಕೀಯ, ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಗಾಂಧೀಜಿ ಮತ್ತು ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುತ್ತವೆ’ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ‘ಗಾಂಧೀಜಿ ಅವರನ್ನು ಅರ್ಥಮಾಡಿಕೊಳ್ಳಲು ವಿನೋಬ ಭಾವೆ ಕೀಲಿಕೈ ಇದ್ದ ಹಾಗೆ’ ಎಂದರು.
‘ಬಾಪು ಅವರಿಗೆ ದೇಶದ ಸಮಸ್ಯೆ ಚಿತ್ರಣ ಕಂಡರೆ, ವಿನೋಬ ತನ್ನೊಳಗೆ ಪರಿವರ್ತನೆ ಆಗಬೇಕು ಎಂದು ಬಯಸುತ್ತಿದ್ದರು. ಗಾಂಧೀಜಿ ಮತ್ತು ವಿನೋಬ ಅವರು ಪ್ರಯೋಗಗಳ ಮೂಲಕ ತತ್ವಗಳನ್ನು ರೂಪಿಸಿ ಜೀವನದಲ್ಲಿ ಅಳವಡಿಸಿಕೊಂಡವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.