ADVERTISEMENT

‘ಜನರಿಂದ ಜನಪದ ಕಲೆ ದೂರ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:45 IST
Last Updated 2 ಜನವರಿ 2014, 19:45 IST
ಹೆಗ್ಗನಹಳ್ಳಿ ಬಸ್‌ ನಿಲ್ದಾಣದ ಮೈದಾನದಲ್ಲಿ ವಿಶ್ವ ಚೇತನ ಬುದ್ಧ ಎಜುಕೇಷನಲ್‌ ಟ್ರಸ್ಟ್‌ ವತಿಯಿಂದ ನಡೆದ ಜನಪದ ಕಲಾಮೇಳದಲ್ಲಿ ಹಿರಿಯ ಸಾಹಿತಿ ಡಾ.ಚಂದ್ರ­ಶೇಖರ ಕಂಬಾರ ಅವರನ್ನು ಅಭಿನಂದಿಸ­ಲಾಯಿತು. ವಿಶ್ವ ಒಕ್ಕಲಿಗ ಮಠದ ಕುಮಾರ ಚಂದ್ರಶೇಖರನಾಥಸ್ವಾಮೀಜಿ,  ಟ್ರಸ್ಟ್‌ ಅಧ್ಯಕ್ಷ ಜಿ.ಆಂಜನಪ್ಪ ಇದ್ದಾರೆ

ಪೀಣ್ಯ ದಾಸರಹಳ್ಳಿ: ‘ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಜನಪದ ಕಲೆಗಳಿಂದ ನೆಮ್ಮದಿ ದೊರೆಯುತ್ತಿತ್ತು. ಈಗ ಈ ಕಲೆಗಳು ಜನರಿಂದ ದೂರವಾಗುತ್ತಿವೆ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಹೆಗ್ಗನಹಳ್ಳಿ ಬಸ್‌ ನಿಲ್ದಾಣದ ಮೈದಾನದಲ್ಲಿ ವಿಶ್ವ ಚೇತನ ಬುದ್ಧ ಎಜುಕೇಷನಲ್‌ ಟ್ರಸ್ಟ್‌ ವತಿಯಿಂದ ನಡೆದ ಜನಪದ ಕಲಾಮೇಳದಲ್ಲಿ ಅವರು ಮಾತನಾಡಿದರು.

‘ವೈಜ್ಞಾನಿಕ ಮನೋಭಾವ ಹೆಚ್ಚಾದಂತೆ ಕಲೆ ಕಣ್ಮರೆಯಾಗುತ್ತಿದ್ದು ಮುಂದಿನ ಪೀಳಿಗೆಗೆ ಜನಪದ ಕಲೆಯನ್ನು ಚಿತ್ರಗಳ ಮೂಲಕ ನೋಡುವ ಪರಿಸ್ಥಿತಿ ಎದುರಾಗಬಹುದು’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.