ADVERTISEMENT

‘ನಾಯಕತ್ವ ಗುಣಗಳನ್ನು ಕಲಿಯುವ ಅಗತ್ಯವಿದೆ: ಡಾ. ಕರ್ಜಗಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:38 IST
Last Updated 16 ಸೆಪ್ಟೆಂಬರ್ 2013, 19:38 IST

ಬೆಂಗಳೂರು: ‘ಇಡೀ ವಿಶ್ವವೇ ಗೌರವಿಸುವ ಮಹಾನ್ ನಾಯಕ ಗಾಂಧೀಜಿ. ಸತ್ಯ, ಅಹಿಂಸೆಯ ಜತೆಯಲ್ಲಿಯೇ ಗಾಂಧೀಜಿಯ ನಾಯಕತ್ವದ ಗುಣಗಳನ್ನು ಕಲಿಯುವ ಅಗತ್ಯವಿದೆ’ ಎಂದು ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸಂಸ್ಥೆಯ ಸಂಸ್ಥಾಪಕ ಡಾ.ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

ಶ್ರುತ್ ಮತ್ತು ಸ್ಮಿತ್ ಸಂಸ್ಥೆಯ ವತಿಯಿಂದ  ನಗರದ ಆರ್.ವಿ. ಟೀಚರ್ಸ್‌ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ಅಧ್ಯಾಪನ’ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿದರು.

‘ಪ್ರತಿಯೊಬ್ಬ ಶಿಕ್ಷಕನೂ ಕೂಡ  ಮಕ್ಕಳಿಗೆ ನಾಯಕತ್ವ ಗುಣಗಳ ಬಗ್ಗೆ ಅರಿವು ಮಾಡಿಕೊಡುವ ನಾಯಕ. ಜ್ಞಾನದ ಜತೆಯಲ್ಲಿಯೇ ಪ್ರಪಂಚ ವನ್ನು ಗ್ರಹಿಸುವ ಮತ್ತು ಸವಾಲು ಗಳಿಗೆ ಒಡ್ಡಿಕೊಳ್ಳುವ ಜಾಯಮಾನ ವನ್ನು ಇಂದಿನ ಮಕ್ಕಳಿಗೆ ಅಗತ್ಯವಾಗಿ ಕಲಿಸಬೇಕಿದೆ. ಶಿಕ್ಷಣವೆಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪ್ರಕ್ರಿಯೆ ಅಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.