ADVERTISEMENT

‘ರಂಗಭೂಮಿಯಿಂದ ಪ್ರಬುದ್ಧತೆ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 20:06 IST
Last Updated 6 ಜನವರಿ 2014, 20:06 IST

ಬೆಂಗಳೂರು: ‘ರಂಗಭೂಮಿ ಭಾವನೆ­ಗಳನ್ನು ತೀಡುವುದಲ್ಲದೇ, ಬದುಕಿಗೆ ಹೊಸ ಅರ್ಥ ನೀಡುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.

ನಾಟ್ಯ ಸಂಘವು ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಪೇಜ್‌ ಟು ಸ್ಟೇಜ್‌’ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬದುಕಿನಾಳ­ದಲ್ಲಿ­ರುವ ನೋವು, ಹತಾಶೆಗಳನ್ನು ನಾಟಕ ಮರೆಸುತ್ತದೆ. ಬೌದ್ಧಿಕ ಪ್ರಬು­ದ್ಧತೆ­ ಹೆಚ್ಚಿಸುತ್ತದೆ’ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಟ್ರಸ್ಟ್‌ ಜಂಟಿ ಕಾರ್ಯದರ್ಶಿ ಡಿ.ಪಿ.ನಾಗರಾಜ್‌ ಮಾತನಾಡಿದರು.

ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿಗಳು ‘ಉಮಾಶ್ರೀಯ ಆತ್ಮಕತೆ’ ನಾಟಕ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.