ADVERTISEMENT

‘ವಿಜ್ಞಾನದಷ್ಟೆ ಕಲೆಯೂ ಮುಖ್ಯ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 20:13 IST
Last Updated 7 ಜನವರಿ 2014, 20:13 IST

ಬೆಂಗಳೂರು: ‘ಮನುಷ್ಯನ ಏಳಿಗೆಗೆ ವಿಜ್ಞಾನದಷ್ಟೆ ಕಲೆಯೂ ಮುಖ್ಯ’ ಎಂದು ಭೌತ ವಿಜ್ಞಾನ ಪ್ರೊ. ಆರ್ಥರ್‌ ಐಸೆನ್‌ಕ್ರಾಫ್ಟ್‌ ಪ್ರತಿಪಾದಿಸಿದರು.

ಅಜೀಂ ಪ್ರೇಮ್‌ಜಿ ವಿಶ್ವ­ವಿದ್ಯಾಲಯವು ನಗರದಲ್ಲಿ ಮಂಗಳ­ವಾರ ಆಯೋಜಿಸಿದ್ದ ಕಾರ್ಯಕ್ರಮ­ದಲ್ಲಿ ‘ವಿಜ್ಞಾನ, ಕಲೆ, ಸಾಹಿತ್ಯ­ದೊಂದಿಗೆ ವಿದ್ಯಾರ್ಥಿಗಳ ಪಾಲ್ಗೊಳ್ಳು­ವಿಕೆ’ ಕುರಿತು ಉಪನ್ಯಾಸ ನೀಡಿದರು.

‘ಮಾನವನು ವಿಕಾಸವಾಗಲು ವಿಜ್ಞಾನದಷ್ಟೇ ಕಲೆಯೂ ಮುಖ್ಯವಾ­ಗುತ್ತದೆ. ವಿಜ್ಞಾನವನ್ನು ಕಲೆಯಂತೆ ಕಲಿಸಿದಾಗ ವಿದ್ಯಾರ್ಥಿಗಳು ವಿಜ್ಞಾನ­ದತ್ತ ಹೆಚ್ಚು ಒಲವು ಬೆಳೆಸಿ­ಕೊಳ್ಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.