ADVERTISEMENT

‘ಸಲಿಂಗರತಿ: ಸುಗ್ರೀವಾಜ್ಞೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 18:43 IST
Last Updated 14 ಡಿಸೆಂಬರ್ 2013, 18:43 IST

ಬೆಂಗಳೂರು:  ‘ಸಲಿಂಗರತಿಗೆ ಅವಕಾಶ ಒದಗಿಸುವಂತಹ ಯಾವುದೇ ಸುಗ್ರೀ ವಾಜ್ಞೆಯನ್ನು ಹೊರಡಿಸುವ ಯೋಚನೆ ಸದ್ಯ ಸರ್ಕಾರದ ಮುಂದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಸ್ಪಷ್ಟಪಡಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲು ಶನಿವಾರ ನಗರಕ್ಕೆ ಆಗಮಿಸಿದ್ದ ಅವರು ವರದಿಗಾರರ ಜತೆ ಮಾತನಾಡಿದರು.

‘ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಈಗಾಗಲೇ ಈ ವಿಷಯದ ಸಂಬಂಧ ಮಾತನಾಡಿದ್ದಾರೆ. ನಮ್ಮ ನಿಲುವೂ ಅದೇ ಆಗಿದೆ’ ಎಂದು ಹೇಳಿದರು.

ಪರಿಷ್ಕೃತ ಲೋಕಪಾಲ್‌ ಮಸೂದೆಯನ್ನು  ಈಗಾಗಲೇ ಲೋಕಸಭೆಯಲ್ಲಿ ಅಂಗೀಕರಿ ಸಲಾಗಿದ್ದು, ರಾಜ್ಯಸಭೆಯಲ್ಲೂ ಮಂಡಿಸಲಾಗಿದೆ.  ಈ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆಯುವ ವಿಶ್ವಾಸವಿದ್ದು, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆಶಯದಂತೆ ಪ್ರಬಲ ಲೋಕಪಾಲ್‌ ಮಸೂದೆಯನ್ನು ಸಿದ್ಧಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.