ADVERTISEMENT

‘ಸುರಂಗ ಮಾರ್ಗ ಸಮಸ್ಯೆಗೆ ಶೀಘ್ರ ಪರಿಹಾರ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಯಲಹಂಕ: ಶಚಿಕ್ಕಜಾಲದ ಮೂಲಕ ಬೈನಹಳ್ಳಿ ಮತ್ತು ಚನ್ನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಸುರಂಗ ಮಾರ್ಗದಲ್ಲಿ ಮಳೆಬಂದ ಸಂದರ್ಭದಲ್ಲಿ ನೀರು ನಿಲ್ಲುವು­ದರಿಂದ ಸಂಪರ್ಕ ಕಡಿತ­ಗೊಂಡು ಉಂಟಾಗುತ್ತಿರುವ ಸಮಸ್ಯೆ­ಯನ್ನು ಆದಷ್ಟು ಬೇಗ ಬಗೆಹರಿ­ಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಟ್ಟಹಲಸೂರು ಗ್ರಾಮದಲ್ಲಿ ಪಂಚಾ­ಯಿತಿ ಕಟ್ಟಡ ನಿಮಾರ್ಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರೈಲ್ವೆ ಕೆಳಸೇತುವೆಯನ್ನು ಅವೈಜ್ಞಾನಿ­ಕವಾಗಿ ನಿರ್ಮಿಸಿ­ರುವುದರಿಂದ ಈ ಸಮಸ್ಯೆ ಉಂಟಾಗಿದ್ದು, ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರೈಲ್ವೆ ಸಚಿವರಿಂದ ಅಧಿಕಾರಿಗಳಿಗೆ ಹೇಳಿಸಿ, ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಬೆಟ್ಟಹಲಸೂರು ಗ್ರಾಮ ದಿನೇದಿನೇ ಬೆಳೆಯುತ್ತಿದ್ದು, ಹಳೆಯ ನೀರಿನ ಟ್ಯಾಂಕ್‌ ಚಿಕ್ಕದಾಗಿದ್ದರಿಂದ ಜಿಲ್ಲಾ ಪಂಚಾಯಿತಿ ವತಿಯಿಂದ ಒಂದುಲಕ್ಷ  ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.