ADVERTISEMENT

ನಾಲ್ಕು ವರ್ಷಗಳಲ್ಲಿ ಫಲಾನುಭವಿಗಳ ಖಾತೆಗೆ ₹3.56 ಲಕ್ಷ ಕೋಟಿ ಜಮೆ

ಕೈಪಿಡಿಯಲ್ಲಿ ಮೋದಿ ಸರ್ಕಾರದ ಸಾಧನೆ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 20:29 IST
Last Updated 24 ಜೂನ್ 2018, 20:29 IST

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 431 ಯೋಜನೆಗಳ ಫಲಾನುಭವಿಗಳಿಗೆ ಒಟ್ಟು ₹3,65,996 ಕೋಟಿಯನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೇ ವರ್ಗಾವಣೆ ಮಾಡಿದೆ.

ಆಧಾರ್‌ ಜೋಡಣೆಯಂತಹ ತಂತ್ರ
ಜ್ಞಾನ ಬಳಕೆಯಿಂದ ಇದು ಸಾಧ್ಯವಾಗಿದೆ ಎಂದು ಬಿಜೆಪಿ ಬಿಡುಗಡೆ ಮಾಡಿರುವ ‘ಶುದ್ಧನಡೆ– ಸೂಕ್ತ ವಿಕಾಸ’ ಕೈಪಿಡಿಯಲ್ಲಿ ಮೋದಿ ಸರ್ಕಾರ ಸಾಧನೆಯನ್ನು ಬಣ್ಣಿಸಲಾಗಿದೆ.

ADVERTISEMENT

ಕೈಪಿಡಿಯಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭಾನುವಾರ ಬಿಡುಗಡೆಗೊಳಿಸಿದರು.

ಈ ಅವಧಿಯಲ್ಲಿ 1 ಕೋಟಿಗೂ ಹೆಚ್ಚು ಆದಾಯ ತೆರಿಗೆದಾರರ ಪ್ಯಾನ್‌ ಸಂಖ್ಯೆಯನ್ನು ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗಿದೆ. ಜಿಎಸ್‌
ಟಿಯಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯಮಿಗಳು ನೋಂದಣಿ ಮಾಡಿಸಿ ಕೊಂಡಿದ್ದಾರೆ. 2013–14ರಲ್ಲಿ ಐಟಿಆರ್‌ (ಆದಾಯ ತೆರಿಗೆ ಪಾವತಿ ಅರ್ಜಿ) ಅರ್ಜಿಗಳಿಗೆ ಹೋಲಿಸಿದರೆ, 2017–18ರಲ್ಲಿ 6.84 ಕೋಟಿ ಐಟಿಆರ್‌ ಸಲ್ಲಿಸಿದ್ದು, ಶೇ. 80.5ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಲಾಗಿದೆ.

ಸಾರಿಗೆ ಕ್ಷೇತ್ರದ ಪ್ರಗತಿ:2013–14ರಲ್ಲಿ ದಿನಕ್ಕೆ 69 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣವಾಗುತ್ತಿದ್ದರೆ, 2017–18ರಲ್ಲಿ 134 ಕಿ.ಮೀ ಆಗುತ್ತಿದೆ. 2013–14ರಲ್ಲಿ 92,851 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿತ್ತು. 2017–18ರಲ್ಲಿ 1,20,543 ಕಿ.ಮೀ. ನಿರ್ಮಾಣ ಆಗಿದೆ. 2013–14 ರಲ್ಲಿ 2,926 ಕಿ.ಮೀ ರೈಲ್ವೆ ಹಳಿಗಳ ನಿರ್ಮಾಣ ಆಗಿತ್ತು, 2017–18ರಲ್ಲಿ 4,405 ಕಿ.ಮೀ ನಿರ್ಮಾಣ ಆಗಿದೆ.

ಸ್ವಚ್ಛ ಭಾರತ ಯೋಜನೆಯಡಿ 7.25 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 3.6 ಲಕ್ಷ ಹಳ್ಳಿಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲಾಗಿದೆ. 2014ರಲ್ಲಿ ಶೇ38ರಷ್ಟಿದ ಶೌಚಾಲಯಗಳ ಪ್ರಮಾಣವು ಶೇ 83 ಕ್ಕೆ ಹೆಚ್ಚಿದೆ. 2014 ರಿಂದ ಈಚೆಗೆ 3.8 ಕೋಟಿ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ.

ಎಸ್‌ಸಿ ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕೆ ಬಜೆಟ್‌ನಲ್ಲಿ ₹95,000 ಕೋಟಿ ಅನುದಾನ ನೀಡಲಾಗಿದೆ. ಒಬಿಸಿ ಕಲ್ಯಾಣ ಕಾರ್ಯಕ್ರಮಗಳಿಗೆ ಶೇ 41ರಷ್ಟು ಅನುದಾನ ಹೆಚ್ಚಿಸಲಾಗಿದೆ. ದೇಶದಲ್ಲಿನ 3 ಲಕ್ಷಶೆಲ್‌ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.