ADVERTISEMENT

ನಿಮ್ಹಾನ್ಸ್‌, ಎನ್‌ಸಿಬಿಎಸ್‌ಗೆ ₹100 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 4:04 IST
Last Updated 31 ಮಾರ್ಚ್ 2023, 4:04 IST
ರೋಹಿಣಿ ನಿಲೇಕಣಿ
ರೋಹಿಣಿ ನಿಲೇಕಣಿ   

ಬೆಂಗಳೂರು: ನಿಮ್ಹಾನ್ಸ್‌ ಮತ್ತು ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರಕ್ಕೆ (ಎನ್‌ಸಿಬಿಎಸ್‌) ‘ರೋಹಿಣಿ ನಿಲೇಕಣಿ ಫಿಲಾಂತ್ರೊಪಿಸ್‌ ಫೌಂಡೇಷನ್‌’ (ಆರ್‌ಎನ್‌ಪಿ) ವತಿಯಿಂದ ₹100 ಕೋಟಿ ದೇಣಿಗೆ ನೀಡಲಾಗಿದೆ.

ರೋಹಿಣಿ ನಿಲೇಕಣಿ ಅವರು ಈ ಫೌಂಡೇಷನ್‌ ಸ್ಥಾಪಿಸಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಚಿಕಿತ್ಸೆ ಕೈಗೊಳ್ಳಲು ರೋಹಿಣಿ ಅವರು ಈ ದೇಣಿಗೆಯನ್ನು ನೀಡಿದ್ದಾರೆ.

ಮಿದುಳಿಗೆ ಸಂಬಂಧಿಸಿದ ಕೇಂದ್ರವನ್ನು ಸ್ಥಾಪಿಸಲು ಈ ಮೊತ್ತವನ್ನು ಬಳಸಲು ಉದ್ದೇಶಿ
ಸಲಾಗಿದೆ. ನಿಮ್ಹಾನ್ಸ್‌ ಮತ್ತು ಎನ್‌ಸಿಬಿಎಸ್‌ ಸಹಭಾಗಿತ್ವದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಮುಂದಿನ ಐದು ವರ್ಷಗಳ
ವರೆಗೆ ಕೈಗೊಳ್ಳುವ ಚಟುವಟಿಕೆ
ಗಳಿಗೆ ರೋಹಿಣಿ ಅವರು ನೆರವು ನೀಡಲಿದ್ದಾರೆ. ಹೊಸದಾಗಿ ಸ್ಥಾಪಿಸಲಾಗುವ ಕೇಂದ್ರವು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ದೀರ್ಘಾವಧಿ ಸಂಶೋಧನೆಯನ್ನು ಸಹ ಕೈಗೊಳ್ಳಲಿದೆ.

‘ಪ್ರಸ್ತುತ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕಾಗಿದೆ. ಕೋವಿಡ್‌ ಸಾಂಕ್ರಾಮಿಕ ಕಾಯಿಲೆಯಿಂದ ಇದು ಮತ್ತಷ್ಟು ಅಗತ್ಯವಾಗಿದೆ. ಈ ದೇಣಿಗೆ ಮೂಲಕ ದೇಶದ ಎರಡು ಮಹತ್ವದ ಸಂಸ್ಥೆಗಳು ಭಾರತ ಮತ್ತು ಜಗತ್ತಿನಾದ್ಯಂತ ಲಕ್ಷಾಂತರ ಮಂದಿಗೆ ಉತ್ತಮ ಚಿಕಿತ್ಸೆ ನೀಡಲು ನೆರವಾಗುತ್ತವೆ ಎನ್ನುವ ಭರವಸೆ ಇದೆ’ ಎಂದು ರೋಹಿಣಿ ನಿಲೇಕಣಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.