ADVERTISEMENT

ಹೆಬ್ಬಾಳ ಫ್ಲೈಓವರ್ ಬಳಿ ನೂರು ಮೊಬೈಲ್‌ ವಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:37 IST
Last Updated 2 ಮಾರ್ಚ್ 2020, 19:37 IST

ಬೆಂಗಳೂರು: ಹೆಬ್ಬಾಳ ಫ್ಲೈಓವರ್‌ ಬಳಿಯ ಬಸ್‌ ನಿಲ್ದಾಣ ದಲ್ಲಿ ನಡೆದು ಹೋಗುತ್ತಿದ್ದ 25 ವರ್ಷದ ಯುವಕನೊಬ್ಬನ ಬ್ಯಾಗ್‌ನಲ್ಲಿದ್ದ 100ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಕೊಡಿಗೇಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಡಿಗೇಹಳ್ಳಿ ಹೆಡ್‌ ಕಾನ್‌ಸ್ಟೇಬಲ್‌ ಬಿ. ಮಂಜುನಾಥ್‌ ತಮ್ಮ ಸಹೊದ್ಯೋಗಿಗಳಾದ ಶಿವರಾಜ್‌ ನಾಡರ್‌, ಆರ್‌.ಎಸ್‌. ಅನಂತ, ಶಿವಾನಂದ ಠೆಕ್ಕಿ ಅವರ ಜೊತೆ ಹೆಬ್ಬಾಳ ಫ್ಲೈಓವರ್‌ ಬಳಿ ಬೆಳಗಿನ ಜಾವ 5.30ರ ಸುಮಾರಿಗೆ ಗಸ್ತು ತಿರುಗುತ್ತಿದ್ದಾಗ ಬ್ಯಾಗ್‌ನಲ್ಲಿ ಮೊಬೈಲ್‌ ತುಂಬಿಕೊಂಡು ಹೋಗುತ್ತಿದ್ದ ಆರೋಪಿಯನ್ನು ಹಿಡಿದಿದ್ದಾರೆ.

ಬಂಧಿತನನ್ನು ಚಾಮರಾಜಪೇಟೆ ಅಜಾದ್‌ ನಗರದ ನಿವಾಸಿ ಇಮ್ರಾನ್‌ ಖಾನ್‌ ಎಂದು ಗುರುತಿಸಲಾಗಿದೆ. ಈತ ಮೊಬೈಲ್‌ಗಳನ್ನು ಎಲ್ಲಿಂದ ತರುತ್ತಿದ್ದ, ಎಲ್ಲಿಗೆ ಕೊಂಡೊಯ್ಯುತ್ತಿದ್ದ, ಅವು ಯಾರಿಗೆ ಸೇರಿದವು ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ಇದರಿಂದ ಸಂಶಯಗೊಂಡು ಆರೋಪಿಯನ್ನು ಬಂಧಿಸಲಾಗಿದೆ.

ADVERTISEMENT

ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.