ADVERTISEMENT

11 ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಕೃಷ್ಣರಾಜಪುರ: ವಿಜಯ ದಶಮಿ ಪ್ರಯುಕ್ತ ಭೋವಿ ಜನಾಂಗದ ವತಿಯಿಂದ ರಾಮಮೂರ್ತಿನಗರದಲ್ಲಿ ಗುರುವಾರ 11 ಗ್ರಾಮ ದೇವತೆಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ನಾಡಿನ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕಂಸಾಳೆ, ತಂಜಾವೂರಿನ ಕವಾಡಿ ಕುಣಿತ, ಕೇರಳ ವಾದ್ಯ, ಮಂಗಳವಾದ್ಯ ಜನರ ಗಮನ ಸೆಳೆಯಿತು.

ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ರಾಮಮೂರ್ತಿನಗರ ಮುಖ್ಯರಸ್ತೆ, ಚನ್ನಸಂದ್ರ ಸೇತುವೆ, ಶಾಂತಿನಗರ ಬಡಾವಣೆ, ಅಂಬೇಡ್ಕರ್‌ನಗರ ಮೂಲಕ ಮುನೇಶ್ವರ ನಗರ ತಲುಪಿತು.
ಭೋವಿ ಗುರುದೇವ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.