ಬೆಂಗಳೂರು: ‘₹ 1.60 ಕೋಟಿ ವಂಚನೆ ಆಗಿದೆ’ ಎಂಬುದಾಗಿ ಇತ್ತೀಚೆಗಷ್ಟೇ ದೂರು ನೀಡಿದ್ದ ನಿರ್ದೇಶಕ ಎಸ್.ನಾರಾಯಣ, ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ಶನಿವಾರ ನೀಡಿದರು.
ಸಿಸಿಬಿ ಡಿಸಿಪಿ ಅವರಿಗೆ ದೂರು ನೀಡಿದ್ದ ನಾರಾಯಣ, ‘ಸಿನಿಮಾವೊಂದರ ನಿರ್ಮಾಣ ಹೆಸರಿನಲ್ಲಿ ಪಾಲುದಾರರಿಂದ ವಂಚನೆ ಆಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕೋರಿದ್ದರು. ದೂರು ಆಧರಿಸಿ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ನಾರಾಯಣ್ ಅವರಿಗೆ ಸೂಚಿಸಿದ್ದರು. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಶನಿವಾರ ಬಂದಿದ್ದ ನಾರಾಯಣ್, ಮಾಹಿತಿ ನೀಡಿ ಹೊರಟು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.