ADVERTISEMENT

170 ಹಳ್ಳಿಗಳ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ವಿವೇಕಾನಂದರ 150ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಬೆಂಗಳೂರು: ಹಲಸೂರಿನ ರಾಮಕೃಷ್ಣಾಶ್ರಮದ ವತಿಯಿಂದ ಮಂಗಳವಾರ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾವುಗೋಡ್ಲುವಿನಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನ ಸಾಮಾಗ್ರಿಗಳನ್ನು ವಿತರಿಸಲಾಯಿತು.

ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಬೆಂಗಳೂರು ದಕ್ಷಿಣ ತಾಲ್ಲೂಕು, ಹೊಸಕೋಟೆ, ಅನೇಕಲ್, ಕನಕಪುರ, ರಾಮನಗರ, ಗೌರಿಬಿದನೂರು, ಪಾವಗಡ, ಮಧುಗಿರಿ ತಾಲ್ಲೂಕುಗಳ 170 ಹಳ್ಳಿಗಳಲ್ಲಿ ಶಾಲಾ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸುವ ಸಲುವಾಗಿ 18 ಲಕ್ಷ ರೂಪಾಯಿ ಮೊತ್ತದ ಈ ಕಾರ್ಯಕ್ರಮವನ್ನು ಆಶ್ರಮವು ಹಮ್ಮಿಕೊಂಡಿದೆ.

ಇದರ ಜೊತೆಯಲ್ಲಿ 15 ವಿವೇಕಾನಂದ ಕೋಚಿಂಗ್ ಸೆಂಟರ್‌ನ ಬಡ ಮಕ್ಕಳಿಗೆ ಶಾಲಾ ಬ್ಯಾಗ್, ವಸ್ತ್ರಗಳ ಜೊತೆಗೆ ಟೂತ್‌ಪೇಸ್ಟ್, ಬ್ರಷ್, ತಲೆ ಎಣ್ಣೆ, ಸಾಬೂನು ಸಹಿತವಾಗಿ ವಿತರಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ಪರಮಸುಖಾನಂದರು ಮಾತನಾಡಿ ವಿವೇಕಾನಂದರ ದೇಶಪ್ರೇಮ ಹಾಗೂ ಅವರು ಯುವ ಜನತೆಯಲ್ಲಿಟ್ಟಿದ್ದ ಶಕ್ತಿಯ ಅರಿವನ್ನು ಶಾಲಾ ಮಕ್ಕಳಲ್ಲಿ ಬಿತ್ತಿ ಅವರನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಮುಖ್ಯವಾಹಿನಿಗೆ ತರುವುದು ನಮ್ಮ ಧ್ಯೇಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಸಂಘದ ಸಂಯೋಜಕ ಸತ್ಯಮೂರ್ತಿ ಸೇರಿದಂತೆ ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.