ADVERTISEMENT

18, 19ರಂದು ಐಸಿಎಐ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 18:35 IST
Last Updated 13 ಆಗಸ್ಟ್ 2012, 18:35 IST

ಬೆಂಗಳೂರು: `ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು (ಐಸಿಎಐ) ದಕ್ಷಿಣ ಭಾರತ ವಲಯದ 44 ನೇ ಪ್ರಾದೇಶಿಕ ಸಮ್ಮೇಳನವನ್ನು ಆಗಸ್ಟ್ 18 ಮತ್ತು 19 ರಂದು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆಯೋಜಿಸಿದೆ~ ಎಂದು ದಕ್ಷಿಣ ಭಾರತ ವಲಯದ ಅಧ್ಯಕ್ಷ ಸಿ.ಎ.ಕೆ. ವಿಶ್ವನಾಥ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ಮತ್ತು ದೇಶದ ಇತರ ಭಾಗಗಳಿಂದ 4000 ಕ್ಕೂ ಹೆಚ್ಚು  ಲೆಕ್ಕ ಪರಿಶೋಧಕರು 2 ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ~ ಎಂದರು. `ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದು, ರಾಜ್ಯ ಸಭೆಯ ಮಾಜಿ ಉಪಾಧ್ಯಕ್ಷ ಡಾ.ಕೆ. ರೆಹಮಾನ್ ಖಾನ್ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ~ ಎಂದು ವಿವರಿಸಿದರು.

`ಸಮ್ಮೇಳನದಲ್ಲಿ ವೃತ್ತಿಪರ ವಿಷಯಗಳ ಕುರಿತಂತೆ ರಾಷ್ಟ್ರೀಯ ತಜ್ಞರಿಂದ ವಿಚಾರ ಸಂಕಿರಣಗಳು ನಡೆಯಲಿವೆ. ತಾಂತ್ರಿಕ ಸೆಷನ್ಸ್‌ಗಳಲ್ಲಿ ಆಂತರಿಕ ವ್ಯವಹಾರಗಳಲ್ಲಿ ವರ್ಗಾವಣೆ ದರ ನಿಗದಿ, ಸಣ್ಣ ಮತ್ತು ಮಧ್ಯಮ ಉದ್ಯಮ, ಕಾರ್ಯ ಗುತ್ತಿಗೆ, ಸೇವಾ ತೆರಿಗೆ, ಮೌಲ್ಯಾಧಾರಿತ ತೆರಿಗೆ, ಆಡಿಟ್ ಹಾಗೂ ಅಶೂರೆನ್ಸ್ ಮಾನದಂಡಗಳು, ನೇರ ತೆರಿಗೆ ಕಾನೂನುಗಳು ಈ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.