ಬೆಂಗಳೂರು: ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸಿದ 19 ನೌಕರರನ್ನು ಕಳೆದ ಆರು ತಿಂಗಳಲ್ಲಿ ಬಿಎಂಟಿಸಿ ಅಮಾನತು ಮಾಡಿದೆ.
ಕುಡಿದು ವಾಹನ ಚಲಾಯಿಸುವುದು ಮತ್ತು ಕರ್ತವ್ಯದಲ್ಲಿರುವಾಗ ಮದ್ಯ ಸೇವಿಸಿರುವುದನ್ನು ಪತ್ತೆ ಹಚ್ಚಲು ಬಿಎಂಟಿಸಿಯ ‘ಸಾರಥಿ ಸ್ಕ್ವಾಡ್’ ಮತ್ತು ‘ಭದ್ರತಾ ತಂಡ’ ಕಾರ್ಯನಿರ್ವಹಿಸುತ್ತಿವೆ. ಆರು ತಿಂಗಳಲ್ಲಿ ವಿವಿಧೆಡೆ ಪರಿಶೀಲನೆ ನಡೆಸಿದಾಗ ಇಬ್ಬರು ಚಾಲಕರು ಮದ್ಯ ಕುಡಿದು ಬಸ್ ಚಲಾಯಿಸುತ್ತಿರುವುದು ಕಂಡು ಬಂದಿದೆ. ಇದಲ್ಲದೆ ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 17 ನೌಕರರು ಕರ್ತವ್ಯದ ವೇಳೆ ಮದ್ಯ ಸೇವಿಸಿರುವುದು ಪತ್ತೆಯಾಗಿದೆ.
‘ಕೆಲವು ಪ್ರಕರಣಗಳನ್ನು ಗಂಭೀರ ಎಂದು ಪರಿಗಣಿಸಲಾಗುತ್ತದೆ. ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುವುದು, ಟಿಕೆಟ್ ನೀಡದೇ ₹ 100ಕ್ಕಿಂತ ಅಧಿಕ ವಂಚನೆ ಮಾಡುವುದೆಲ್ಲ ಇದರಲ್ಲಿ ಒಳಗೊಂಡಿದೆ. ಗಂಭೀರ ಸ್ವರೂಪದ ಪ್ರಕರಣ ಪತ್ತೆಯಾದ ತಕ್ಷಣವೇ ಅಂಥವರನ್ನು ಅಮಾನತು ಮಾಡಲಾಗುತ್ತದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.