ಬೆಂಗಳೂರು: ಹೊರರಾಜ್ಯಗಳಿಂದ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ ಆರೋಪಿ ಎಂ. ಗೋಪಿ ಅಲಿಯಾಸ್ ನಾರಾಯಣ್ (25) ಎಂಬುವರನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಾಗಮ್ಮನಗರದ ನಿವಾಸಿ ಗೋಪಿ ಹಲವು ತಿಂಗಳಿನಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದ. ಈತನನ್ನು ಬಂಧಿಸಿ, ₹50 ಸಾವಿರ ಮೌಲ್ಯದ 2 ಕೆ.ಜಿ. 115 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಿನ್ನಿ ಸ್ಟೋನ್ ಸೇತುವೆ ಬಳಿ ಸೆ. 7ರಂದು ಸುತ್ತಾಡುತ್ತಿದ್ದ ಆರೋಪಿಯು ಗ್ರಾಹಕರಿಗೆ ಗಾಂಜಾ ಮಾರುತ್ತಿದ್ದ ವೇಳೆ ಬಂಧಿಸಲಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.