ಕೂದಲು
ಬೆಂಗಳೂರು: ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಕ್ರಾಸ್‌ನ ಗೋದಾಮಿನಲ್ಲಿ ಇಡಲಾಗಿದ್ದ ₹90 ಲಕ್ಷ ಮೌಲ್ಯದ 27 ಚೀಲ ತಲೆ ಕೂದಲು ಕಳ್ಳತನವಾಗಿದೆ.
ವೆಂಕಟರಮಣ ಅವರ ಗೋದಾಮಿನ ಬೀಗ ಒಡೆದು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಮಾಲೀಕರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
'ವಿದೇಶದ ವಿಗ್ ತಯಾರಿಕಾ ಕಂಪನಿಗಳಿಗೆ ರಫ್ತು ಮಾಡಲು ತಲೆ ಕೂದಲು ಸಂಗ್ರಹಿಸಲಾಗಿತ್ತು. ಚೀನಾ, ಬರ್ಮಾ ಹಾಗೂ ಹಾಂಕಾಂಗ್‌ಗೆ ರಫ್ತು ಮಾಡಲು 27 ಚೀಲಗಳಲ್ಲಿ ಕೂದಲು ದಾಸ್ತಾನು ಮಾಡಲಾಗಿತ್ತು. ಕಳೆದ ವಾರ ಕೂದಲು ಖರೀದಿ ಸಂಬಂಧ ಚೀನಾದ ವ್ಯಾಪಾರಿಗಳ ಜತೆ ಮಾತುಕತೆ ನಡೆದಿತ್ತು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.