ADVERTISEMENT

ಬೆಂಗಳೂರು | 311 ಸಂಚಾರ ನಿಯಮ ಉಲ್ಲಂಘನೆ: ಸವಾರನಿಗೆ ₹1.61 ಲಕ್ಷ ದಂಡ!

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 17:19 IST
Last Updated 3 ಫೆಬ್ರುವರಿ 2025, 17:19 IST
   

ಬೆಂಗಳೂರು: ಸ್ಕೂಟರ್ ಬೆಲೆ ಸುಮಾರು ₹50 ಸಾವಿರ.  ಆದರೆ, ಅದರ ಮಾಲೀಕ ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಪಾವತಿಸಬೇಕಾದ ದಂಡದ ಮೊತ್ತ ₹ 1.61 ಲಕ್ಷ! ಸ್ಕೂಟರ್ ಬೆಲೆಗಿಂತ ದಂಡದ ಮೊತ್ತವೇ ಅಧಿಕವಾಗಿದೆ.

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ, ನಾಪತ್ತೆ ಆಗುತ್ತಿದ್ದ ಆರೋಪಿಯನ್ನು ಸಿಟಿ ಮಾರುಕಟ್ಟೆ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಕೂಟರ್ ಸಹ ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಕಾಲಸಿಪಾಳ್ಯದ ಪೆರಿಯಾಸ್ವಾಮಿ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ADVERTISEMENT

ಫೆಬ್ರುವರಿ 2023ರಿಂದ 311 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇರುವುದು ಕಂಡು ಬಂದಿದೆ.

ಕೆಎ 05 ಜೆಎಕ್ಸ್ 1344 ನೋಂದಣಿ ಸಂಖ್ಯೆ ಹೊಂದಿದ್ದ ಸ್ಕೂಟರ್‌ ಮಾಲೀಕ, ದುಬಾರಿ ಮೊತ್ತದ ದಂಡ ಪಾವತಿಸಬೇಕಿದೆ.

ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸಲಾಗಿದೆ. ಸ್ಕೂಟರ್ ಮಾಲೀಕನಿಗೆ ನೋಟಿಸ್ ಸಹ ನೀಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.