ADVERTISEMENT

ವೈವಾಹಿಕ ಜಾಲತಾಣದಲ್ಲಿ ಯುವತಿಗೆ ₹4 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 20:29 IST
Last Updated 8 ಜುಲೈ 2020, 20:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವೈವಾಹಿಕ ಜಾಲತಾಣದಲ್ಲಿ ಯುವತಿಯೊಬ್ಬಳಿಗೆ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ವಿವಾಹ ಆಗುವುದಾಗಿ ನಂಬಿಸಿ ₹4 ಲಕ್ಷ ಪಡೆದು ವಂಚಿಸಿದ್ದಾನೆ. ಜೆ.ಪಿ.ನಗರದ ನಟರಾಜ್ ಲೇಔಟ್ ನಿವಾಸಿ 27 ವರ್ಷದ ಯುವತಿ ವಂಚನೆ ಒಳಗಾದವರು. ಅಪರಿಚಿತರ ವಿರುದ್ಧ ದಕ್ಷಿಣ ವಿಭಾಗ ಸೈಬರ್‌ ವಿಭಾಗದ ಪೊಲೀಸರಿಗೆ ಯುವತಿ ದೂರು ನೀಡಿದ್ದಾರೆ.

ಜೂನ್‌ ತಿಂಗಳಲ್ಲಿ ವೈವಾಹಿಕ ಜಾಲತಾಣದಲ್ಲಿ ಯುವತಿ ಸ್ವವಿವರ ಅಪ್ಲೋಡ್ ಮಾಡಿದ್ದರು. ಆಗ ಪರಿಚಯವಾಗಿದ್ದ ವ್ಯಕ್ತಿಯೊಬ್ಬ. ‘ನಾನು ಇಂಗ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ವಿವಾಹವಾಗುತ್ತೇನೆ’ ಎಂದು ನಂಬಿಸಿದ್ದ.

ಬಳಿಕ ಇಬ್ಬರು ಮೊಬೈಲ್‌ ನಂಬರ್ ವಿನಿಮಯ ಮಾಡಿಕೊಂಡು ದಿನಾ ವ್ಯಾಟ್ಸ್ಆ್ಯಪ್ ನಲ್ಲಿ ಚಾಟಿಂಗ್ ಮಾಡುತ್ತಿದ್ದರು. ಜೂನ್ 15ರಂದು ಸಂದೇಶ ಕಳುಹಿಸಿದ್ದ ಆತ,‘ಶೀಘ್ರದಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುತ್ತಿದ್ದೇನೆ. ಮೊದಲು ಲಗೇಜ್ ಕಳುಹಿಸುತ್ತಿದ್ದೇನೆ. ಲಗೇಜ್ ಸ್ವೀಕರಿಸು’ ಎಂದು ಯುವತಿಗೆ ಹೇಳಿದ್ದ.

ADVERTISEMENT

ಜೂನ್ 22ರಂದು ಯುವತಿಗೆ ಕರೆ ಮಾಡಿದ್ದ ಅಪರಿಚಿತರು, ಕೊರಿಯರ್ ಬಂದಿದೆ. ಟ್ಯಾಕ್ಸ್‌ ಕಟ್ಟಿ ಅದನ್ನು ಪಡೆದುಕೊಳ್ಳಿ’ ಎಂದು ಸೂಚಿಸಿದ್ದರು. ನಂಬಿದ ಯುವತಿ ಹಂತ ಹಂತವಾಗಿ ₹ 4 ಲಕ್ಷ ಪಾವತಿಸಿದ್ದಾರೆ. ಈವರೆಗೂ ಕೊರಿಯರ್‌ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.