ADVERTISEMENT

500 ಜನರಿಗೆ ಕೃತಕ ಕಾಲುಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 19:39 IST
Last Updated 10 ನವೆಂಬರ್ 2017, 19:39 IST
ಅಂಗವಿಕಲರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು
ಅಂಗವಿಕಲರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು   

ಬೆಂಗಳೂರು: ಬೆಂಗಳೂರು ರೌಂಡ್ ಟೇಬಲ್ 7, ಬೆಂಗಳೂರು ಲೇಡಿಸ್ ಸರ್ಕಲ್ 19 ಹಾಗೂ ರೌಂಡ್ ಟೇಬಲ್ ಇಂಡಿಯಾ ಫೌಂಡೇಷನ್‌ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 37ನೇ ವಾರ್ಷಿಕ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚಿನ ಜನರಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು.

‘ಕೃತಕ ಕಾಲು ಜೋಡಣೆಗೆ ನೆರವಾಗುವ ಉದ್ದೇಶದಿಂದ ಹೆಲ್ಪ್‌ ಸಮ್‌ಒನ್‌ ವಾಕ್‌ ಎಂಬ ಅಭಿಯಾನವನ್ನು ಆರಂಭಿಸಿದ್ದೆವು. ಈ ವರ್ಷ ₹5 ಲಕ್ಷ ದೇಣಿಗೆ ಸಂಗ್ರಹಿಸಿದ್ದೇವೆ. ಈ ಹಣದಲ್ಲಿ ಖರೀದಿಸಿದ ಕೃತಕ ಕಾಲುಗಳನ್ನು ಮಹಾವೀರ್‌ ಜೈನ್‌ ಆಸ್ಪತ್ರೆಗೆ ಹಸ್ತಾಂತರಿಸಿದ್ದೇವೆ’ ಎಂದು ರೌಂಡ್ ಟೇಬಲ್ 7ರ ಅಧ್ಯಕ್ಷ ನಿತಿನ್ ಬನ್ಸಾಲ್ ತಿಳಿಸಿದರು.

‘ಕಾಲು ಕಳೆದುಕೊಂಡಿರುವವರು ಕೃತಕ ಕಾಲುಗಳಿಂದಾಗಿ ಓಡಾಡಲು ಸಾಧ್ಯವಾಗಿದೆ. ಅವರ ಗೌರವಯುತ ಜೀವನಕ್ಕೆ ಇದು ಸಹಕಾರಿ’ ಎಂದು ಲೇಡಿಸ್ ಸರ್ಕಲ್ 19ರ ಅಧ್ಯಕ್ಷೆ ಜ್ಯೋತಿ ಬನ್ಸಾಲ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.