ADVERTISEMENT

ಚೆಳಿಕೆರೆಯಲ್ಲಿ ಸಿದ್ಧರಾಮೇಶ್ವರ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ರಾಧಮ್ಮ ವೆಂಕಟೇಶ್, ವಿ.ಸುರೇಶ್,  ಬಿ.ಎಂ.ಕೃಷ್ಣ, ಜಿ.ವಿ.ನಾರಾಯಣ ಇದ್ದಾರೆ
ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯೆ ರಾಧಮ್ಮ ವೆಂಕಟೇಶ್, ವಿ.ಸುರೇಶ್, ಬಿ.ಎಂ.ಕೃಷ್ಣ, ಜಿ.ವಿ.ನಾರಾಯಣ ಇದ್ದಾರೆ   

ಬೆಂಗಳೂರು: ಭೋವಿ ಜನಾಂಗದ ಒಕ್ಕೂಟದ ವತಿಯಿಂದ ಕೆ.ಆರ್.ಪುರ ಕ್ಷೇತ್ರದ ಚೆಳಿಕೆರೆಯಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.

ಶಿವಶರಣರಲ್ಲಿ ಒಬ್ಬರಾದ ಸಿದ್ಧರಾಮೇಶ್ವರ ಅವರು ಕರ್ಮಯೋಗದಿಂದ ಪ್ರಸಿದ್ಧಿ ಪಡೆದ ಮಹಾನ್‌ ಪುರುಷ. ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ವಚನಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ್ದರು ಎಂದು ಶಾಸಕ ಬಿ.ಎ.ಬಸವರಾಜು ಹೇಳಿದರು.

ಭೋವಿ ಸಮುದಾಯದವರು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದರು.

ADVERTISEMENT

ಕನ್ನಂಬಾಡಿ ಕಟ್ಟೆ, ಮೈಸೂರು ಅರಮನೆ ಹಾಗೂ ದೇವಾಲಯಗಳನ್ನು ನಿರ್ಮಿಸುವಲ್ಲಿ ಭೋವಿ ಜನಾಂಗದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.