ADVERTISEMENT

ಹಳ್ಳಿಯ ಸೊಗಡಿನ ‘ಸುಗ್ಗಿಹಬ್ಬ’

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:02 IST
Last Updated 7 ಫೆಬ್ರುವರಿ 2018, 20:02 IST

ಬೆಂಗಳೂರು: ಚಿತ್ತಾರದ ರಂಗೋಲಿ, ಅಲಂಕರಿಸಿದ್ದ ಎತ್ತಿನಗಾಡಿಗಳು, ಗೋವುಗಳು, ಕಬ್ಬಿನ ಗೋಪುರ, ಒಳಕಲ್ಲು, ಒನಕೆ, ಬೀಸುವಕಲ್ಲು, ಧಾನ್ಯಗಳ ರಾಶಿಗಳು...

–ಹೀಗೆ ಹಳ್ಳಿಯ ಸಂಕ್ರಾಂತಿಯ ದೃಶ್ಯ ಕಂಡುಬಂದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಯಲಹಂಕ ವಿಧಾನಸಭಾ ಕ್ಷೇತ್ರ ಮಹಿಳಾ ಘಟಕ, ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಬೆಂಗಳೂರು ಉತ್ತರ ತಾಲ್ಲೂಕು ಘಟಕದ ಆಶ್ರಯದಲ್ಲಿ ಯಲಹಂಕದ ರಾಜಾನುಕುಂಟೆ ಬಳಿ ಆಯೋಜಿಸಿದ್ದ ಗ್ರಾಮೀಣ ಸೊಗಡಿನ ‘ಸುಗ್ಗಿಹಬ್ಬ’ದಲ್ಲಿ.

ಕಣದಲ್ಲಿ ಧಾನ್ಯಗಳ ರಾಶಿಗೆ ಪೂಜೆ ನೆರವೇರಿಸುವ ಮೂಲಕ ಸುಗ್ಗಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರು ಮಡಕೆಗಳಲ್ಲಿ ಪೊಂಗಲ್‌ ತಯಾರಿಸಿ ಹಂಚಿದರು. ರಾಗಿಬೀಸಿ, ಭತ್ತಕುಟ್ಟಿ ಖುಷಿಪಟ್ಟರು. ಮಕ್ಕಳು ಮತ್ತು ಮಹಿಳೆಯರು ಪ್ರಸ್ತುತಪಡಿಸಿದ ಜಾನಪದ ನೃತ್ಯ, ಹಾಡು, ಕೋಲಾಟ ಜನರ ಗಮನ ಸೆಳೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.