ADVERTISEMENT

ಕೃಷಿ ವಿಶ್ವವಿದ್ಯಾಲಯ: 967 ವಿದ್ಯಾರ್ಥಿಗಳಿಗೆ ಪದವಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 20:17 IST
Last Updated 7 ಫೆಬ್ರುವರಿ 2018, 20:17 IST

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿ‌ದ್ಯಾಲಯದ 52ನೇ ಘಟಿಕೋತ್ಸವದಲ್ಲಿ 967 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಕುಲಪತಿ ಡಾ.ಎಚ್‌.ಶಿವಣ್ಣ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶುಕ್ರವಾರ ಬೆಳಿಗ್ಗೆ 11ಕ್ಕೆ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರ ಪ್ರಸಾದ್‌ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ. ನಿವೃತ್ತ ಐಎಎಸ್‌ ಅಧಿಕಾರಿ ಮಂಜು ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ’ ಎಂದರು.

631 ಮಂದಿ ಸ್ನಾತಕ ಪದವಿ, 272 ಮಂದಿ ಸ್ನಾತಕೋತ್ತರ ಪದವಿ, 64 ಮಂದಿ ಪಿಎಚ್‌.ಡಿ ಪದವಿ ಪಡೆಯಲಿದ್ದಾರೆ. 118 ಚಿನ್ನದ ಪದಕಗಳು ಹಾಗೂ 18 ಚಿನ್ನದ ಲೇಪನವಿರುವ ಪ್ರಮಾಣ ಪತ್ರಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು. 

ADVERTISEMENT

ಚಿನ್ನದ ಪದಕ ಪಡೆದವರಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರದ್ದೇ ಮೇಲುಗೈ. 36 ವಿದ್ಯಾರ್ಥಿನಿಯರು 83 ಚಿನ್ನದ ಪದಕ ಪಡೆಯಲಿದ್ದಾರೆ.

ಡಿಜಿಟಲ್‌ ಮೌಲ್ಯಮಾಪನ ಪದ್ಧತಿ

ವಿಶ್ವವಿದ್ಯಾಲಯದಲ್ಲಿ ಡಿಜಿಟಲ್‌ ಮೌಲ್ಯಮಾಪನ ಪದ್ಧತಿಯನ್ನು ಗುರುವಾರ ಉದ್ಘಾಟಿಸಲಾಗುವುದು. ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಹಾಗೂ ಪತ್ರಿಕೆಗಳ ಖರ್ಚು ಕಡಿತಗೊಳ್ಳಲಿದೆ ಎಂದು ಎಚ್‌. ಶಿವಣ್ಣ ಮಾಹಿತಿ ನೀಡಿದರು.

ಮೌಲ್ಯಮಾಪನಕ್ಕೆ ಉಗಮ
(ಅಂಡರ್‌ ಗ್ರ್ಯಾಜುಯೇಟ್ ಅಕಾಡೆಮಿಕ್‌ ಮ್ಯಾನೇಜ್‌ಮೆಂಟ್‌ ಸಾಫ್ಟ್‌ವೇರ್‌) ತಂತ್ರಾಂಶ ಬಳಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.