ಬೆಂಗಳೂರು: ಸಿಂಗಸಂದ್ರ ವಾರ್ಡ್‌ನ ಅಂಬೇಡ್ಕರ್‌ನಗರದ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯು (ಸಮತಾವಾದ) ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಪುರಭವನ ಬಳಿಯಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪ್ರತಿಭಟನೆ ನಡೆಸಿದ ನೂರಾರು ಮಂದಿ, ಹಕ್ಕುಪತ್ರ ನೀಡದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ಅಧ್ಯಕ್ಷ ಎಚ್.ಮಾರಪ್ಪ, ‘ಅಂಬೇಡ್ಕರ್‌ನಗರದಲ್ಲಿ 35 ವರ್ಷಗಳಿಂದ 350 ಕುಟುಂಬಗಳು ವಾಸ ಇವೆ. ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರೂ ಅದು ಈಡೇರಿಲ್ಲ’ ಎಂದು ದೂರಿದರು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಚಿಕ್ಕಬೇಗೂರು, ಶ್ರೀನಗರ, ಬೆಂಗಳೂರು ಉತ್ತರ ತಾಲ್ಲೂಕಿನ ಕೊಂಡಪ್ಪ ಬಡಾವಣೆ, ಕೋಗಿಲು ಬಡಾವಣೆ, ಹೆಬ್ಬಾಳದ ಕುಂತಿ ಗ್ರಾಮ, ಮತ್ತಿಕೆರೆ, ಎಂ.ಆರ್.ಜಯರಾಂ ಕಾಲೊನಿ, ಲಗ್ಗೆರೆ, ಹೆಗ್ಗನವಳ್ಳಿಯಲ್ಲಿ ವಾಸವಿರುವ ನೂರಾರು ದಲಿತರಿಗೂ ಹಕ್ಕುಪತ್ರಗ
ಳನ್ನು ನೀಡಬೇಕೆಂದು ಒತ್ತಾಯಿಸಿದರು.
ರಾಜಕಾರಣಿಗಳು, ಕಾರ್ಪೊರೇಟ್ ಕಂಪನಿಗಳು ಹಾಗೂ ಸ್ಥಳೀಯ ಪ್ರಭಾವಿಗಳು ಅಕ್ರಮವಾಗಿ ಸರ್ಕಾರಿ ಭೂಮಿ ಕಬಳಿಸುತ್ತಿದ್ದಾರೆ. ಅದನ್ನು ತಡೆಗಟ್ಟದ ಸರ್ಕಾರ, ಭೂಹೀನರಿಗೆ ನಿವೇಶನ ಹಂಚಿಕೆ ಮಾಡಲು ನೆಪ ಹೇಳುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.