ADVERTISEMENT

6 ಬೋಗಿಗಳ ಇನ್ನೊಂದು ಮೆಟ್ರೊಗೆ ನಾಳೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 19:32 IST
Last Updated 20 ನವೆಂಬರ್ 2018, 19:32 IST

ಬೆಂಗಳೂರು: ಆರು ಬೋಗಿಗಳನ್ನು ಅಳವಡಿಸಿದ ಮೆಟ್ರೊ ರೈಲಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನ. 22ರಂದು ಬೆಳಿಗ್ಗೆ 10.30ಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ನಿಲ್ದಾಣದಲ್ಲಿ (ವಿಧಾನಸೌಧ) ಚಾಲನೆ ನೀಡಲಿದ್ದಾರೆ.

ಮೆಟ್ರೊಗೆ ಆರು ಬೋಗಿಗಳನ್ನು ಅಳವಡಿಸಿದ ಮೂರನೇ ರೈಲು ಇದಾಗಿದೆ. ಜೂನ್‌ 22ರಂದು ಆರು ಬೋಗಿಗಳ ಮೊದಲ ರೈಲು ಸಂಚರಿಸಿತ್ತು. ಅ. 4ರಂದು ಎರಡನೇ ರೈಲು ಸಂಚರಿಸಿತ್ತು. ಇದೀಗ ಮೂರನೇ ರೈಲಿಗೆ ಹಸಿರು ನಿಶಾನೆ ಸಿಗಲಿದೆ.

ಬೆಮೆಲ್‌ ಸಂಸ್ಥೆ ಪ್ರತಿ ತಿಂಗಳು ಮೂರು ಬೋಗಿಗಳ ಕೋಚ್‌ ನಿರ್ಮಿಸುತ್ತಿದೆ. ಮುಂದಿನ ಜೂನ್‌ ವೇಳೆಗೆ ಹಸಿರು ಮತ್ತು ನೇರಳೆ ಮಾರ್ಗದ ಎಲ್ಲ 50 ಗಾಡಿಗಳು 6 ಬೋಗಿಗಳೊಂದಿಗೆ ಸಂಚರಿಸಲಿವೆ ಎಂದು ನಿಗಮದ ಮೂಲಗಳು ಹೇಳಿವೆ.

ADVERTISEMENT

ಸದ್ಯ ಮೂರು ಬೋಗಿಗಳ ರೈಲಿನಲ್ಲಿ 975 ಮಂದಿ ಪ್ರಯಾಣಿಸಬಹುದು. 6 ಬೋಗಿಗಳು ಜೋಡಣೆಗೊಂಡಾಗ ಪ್ರತಿ ರೈಲಿನಲ್ಲಿ 2,004 ಮಂದಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ನಿಗಮ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.