ADVERTISEMENT

ಸುರಿವ ಮಳೆ ಲೆಕ್ಕಿಸದೆ ಕಾಲುವೆ ಸ್ವಚ್ಛಗೊಳಿಸಿದ ಮಹಿಳಾ ಕಾನ್‌ಸ್ಟೆಬಲ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 22:01 IST
Last Updated 24 ಅಕ್ಟೋಬರ್ 2020, 22:01 IST
ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದು
ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದು   

ಬೆಂಗಳೂರು: ಕೆಂಗೇರಿ ಬಳಿ ರಸ್ತೆಯಲ್ಲಿ ತುಂಬಿಕೊಂಡಿದ್ದ ನೀರನ್ನು ತೆರವು ಮಾಡಲು ಮಹಿಳಾ ಕಾನ್‌ಸ್ಟೆಬಲ್ ಪುಷ್ಪಾ ಮಳೆಯಲ್ಲೇ ಕರ್ತವ್ಯ ನಿರ್ವಹಿಸಿದ್ದು, ಅವರ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೆಂಗೇರಿ ಸಂಚಾರ ಠಾಣೆ ಕಾನ್‌ಸ್ಟೆಬಲ್ ಆಗಿರುವ ಪುಷ್ಪಾ ಅವರು ಮೈಸೂರು ರಸ್ತೆಯಲ್ಲಿ ಕೆಲಸ ಮಾಡುತ್ತಿ
ದ್ದರು. ಅದೇ ವೇಳೆ ಜೋರಾಗಿ ಮಳೆಯಾಗಿ, ರಸ್ತೆಯಲ್ಲಿ ನೀರು ನಿಂತುಕೊಂಡಿತ್ತು. ವಾಹನಗಳು ನಿಧಾನಗತಿಯಲ್ಲಿ ಚಲಿಸಿದ್ದರಿಂದ ದಟ್ಟಣೆ ಕಂಡುಬಂತು.

ಕೋಲು ಹಿಡಿದು ಕಾಲುವೆಯಲ್ಲಿದ್ದ ಕಸವನ್ನು ತೆಗೆದ ಪುಷ್ಪಾ, ನೀರು ಹರಿದುಹೋಗಲು ದಾರಿ ಮಾಡಿ
ಕೊಟ್ಟರು. ಬಳಿಕವೇ ರಸ್ತೆಯಲ್ಲಿ ನೀರು ಕಡಿಮೆಯಾಯಿತು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾ
ಡುತ್ತಿದೆ. ಪುಷ್ಪಾ ಅವರ ಕೆಲಸವನ್ನು ಹೊಗಳಿರುವ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಸೌಮ್ಯಲತಾ, ಆ ಬಗ್ಗೆ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.