ಬೆಂಗಳೂರು: ಚಿಕ್ಕಪೇಟೆಯಲ್ಲಿ ಮಹಿಳೆಯೊಬ್ಬರು ಪೊಲೀಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿ, ಅವರ ಕೈಗೆ ಕಚ್ಚಿರುವ ಘಟನೆ ಭಾನುವಾರ ನಡೆದಿದೆ.
‘ಪಾದಚಾರಿ ಮಾರ್ಗದಲ್ಲಿ ಇಡಲಾಗಿದ್ದ ಅಂಗಡಿಗಳನ್ನು ಪೊಲೀಸರು ತೆರವು ಮಾಡಿಸುತ್ತಿದ್ದಾಗ, ‘ಯಾಕೆ ಜನರಿಗೆ ಈ ರೀತಿ ತೊಂದರೆ ಮಾಡುತ್ತೀರಾ? ಎಂದುಮಹಿಳೆ ಪ್ರಶ್ನಿಸಿದ್ದರು. ಪೊಲೀಸ್ ಹಾಗೂ ಮಹಿಳೆ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಲು ಮುಂದಾದಾಗ ಪೊಲೀಸ್ ಸಿಬ್ಬಂದಿ ಮೊಬೈಲ್ ಕಸಿದುಕೊಂಡರು’.
‘ಮೊಬೈಲ್ ನೀಡಲು ಪೊಲೀಸರು ನಿರಾಕರಿಸಿದಾಗ ಆಕ್ರೋಶಗೊಂಡ ಮಹಿಳೆ, ಪೊಲೀಸ್ ಸಿಬ್ಬಂದಿಯ ಕೈಗೆ ಕಚ್ಚಿದ್ದಾರೆ. ಮಹಿಳೆಯನ್ನು ಕೆ.ಆರ್.ಮಾರುಕಟ್ಟೆ ಪೊಲೀಸರು ವಶಕ್ಕೆ ಪಡೆದರು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.