ADVERTISEMENT

ಅತ್ಯಾಚಾರಕ್ಕೆ ಕುಮ್ಮಕ್ಕು: 10 ವರ್ಷ ಜೈಲು ಶಿಕ್ಷೆ, ₹ 5 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 19:17 IST
Last Updated 28 ಜನವರಿ 2023, 19:17 IST
   

ಬೆಂಗಳೂರು: ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಅಪರಾಧಿ ಸರಸ್ವತಿಗೆ (45) ಎಫ್‌ಟಿಎಸ್‌ಸಿ 4ನೇ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ, ₹ 5 ಸಾವಿರ ದಂಡ ವಿಧಿಸಿ ಆದೇಶಿಸಿದೆ.

15 ವರ್ಷದ ಬಾಲಕಿಯ ಅಜ್ಜಿ ಜಯನಗರದ ಬಿ.ಟಿ. ಆಸ್ಪತ್ರೆ ಯಲ್ಲಿ 2013ರ ಜ.15ರಂದು ಚಿಕಿತ್ಸೆಗೆ ದಾಖಲಾಗಿದ್ದರು.

ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಂದೆ ನೋಡಲು, ಶಿಕ್ಷೆಗೆ ಒಳಗಾಗಿರುವ ಸಂಜಯ್‌ ಬಂದು ಹೋಗುತ್ತಿದ್ದ. ಅಲ್ಲಿದ್ದ ಸರಸ್ವತಿ ಎಂಬಾಕೆ
ಬಾಲಕಿಯನ್ನು ಪರಿಚಯಿಸಿಕೊಂಡು ಮನೆಗೆ ಕಳುಹಿಸುವುದಾಗಿ ಸುಳ್ಳು ಹೇಳಿ, ತನ್ನ ಮನೆಗೆ ಕರೆದೊಯ್ದಿ ದ್ದಳು. ಅಲ್ಲಿ ಸಂಜಯ್‌ ಜತೆಗೆ ಮದುವೆಯಾಗುವಂತೆ ಬಲವಂತ ಮಾಡಿ ಮನೆಯಲ್ಲೇ ಇಟ್ಟುಕೊಂಡಿದ್ದಳು.

ADVERTISEMENT

ಆ ವೇಳೆಯಲ್ಲಿ ಬಾಲಕಿ ಮೇಲೆ ಸಂಜಯ್‌ ಅತ್ಯಾಚಾರ ನಡೆಸಿದ್ದ. ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸಿಸಿಎಚ್ 51ನೇ ನ್ಯಾಯಾಲಯವು ಈ ಹಿಂದೆ ಅಪರಾಧಿ ಸಂಜಯ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ ₹ 15 ಸಾವಿರ ದಂಡ ವಿಧಿಸಿತ್ತು. ಆಗ 2ನೇ ಆರೋಪಿ ಸರಸ್ವತಿ ತಲೆಮರೆಸಿಕೊಂಡಿದ್ದಳು.

ನಂತರ, ಸರಸ್ವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಈಗ ಪ್ರಕರಣದ 2ನೇ ಅಪರಾಧಿಗೂ ಶಿಕ್ಷೆ ಪ್ರಕಟವಾಗಿದೆ.

ಸರ್ಕಾರಿ ವಕೀಲ ಆರ್‌.ರವಿಚಂದ್ರ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.