ADVERTISEMENT

ಅಕ್ರಮ ಆಸ್ತಿ ಗಳಿಕೆ: ಎಂಆರ್‌ಪಿಎಲ್‌ ಜನರಲ್ ಮ್ಯಾನೇಜರ್ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 19:10 IST
Last Updated 16 ಜನವರಿ 2019, 19:10 IST

ಬೆಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌ನ) ಜನರಲ್ ಮ್ಯಾನೇಜರ್ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದೆ.

ಆರೋಪಿ ನಿರಂಜನ್ ಗುಪ್ತಾ ಅವರು ₹3.01 ಕೋಟಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ಆದಾಯ ಮೂಲವನ್ನು ತೋರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಬಿಐ ಹೇಳಿದೆ. 2012 ಮತ್ತು 2018 ರ ನಡುವಿನ ಅವರ ಆದಾಯ ಮತ್ತು ವೆಚ್ಚದ ತನಿಖೆ ಮಾಡಲಾಗಿದೆ. 2012 ರಲ್ಲಿ ನಿರಂಜನ್ ಗುಪ್ತಾ ಅವರು ₹2.01 ಕೋಟಿ ಆಸ್ತಿ ಹೊಂದಿದ್ದರು. ಕಳೆದ ಡಿಸೆಂಬರ್‌ವರೆಗೆ ಅದು ₹7 ಕೋಟಿಗೆ ಏರಿಕೆಯಾಗಿದೆ. ಇದೇ ವೇಳೆ ಅವರ ಕುಟುಂಬವು ₹1.32 ಕೋಟಿ ಖರ್ಚು ಮಾಡಿದೆ ಎಂದು ತಿಳಿಸಿದೆ.

ನಿರಂಜನ್ ₹3.01 ಕೋಟಿ ಅಕ್ರಮ ಆಸ್ತಿ ಹೊಂದಿದ್ದು, ಇದು ಅವರ ಆದಾಯದ ಮೂಲಗಳ ಶೇ 89 ರಷ್ಟು ಹೆಚ್ಚಾಗಿದೆ ಎಂದು ಸಿಬಿಐ ಎಫ್ಐಆರ್‌ನಲ್ಲಿ ದಾಖಲಿಸಿದೆ. ನಿರಂಜನ್ ಗುಪ್ತಾ 1995 ರಲ್ಲಿ ಸಿವಿಲ್ ಎಂಜಿನಿಯರ್ ಎಂಆರ್‌ಪಿಎಲ್‌ಗೆ ಸೇರಿದ್ದು, ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.