ADVERTISEMENT

ಭೂಮಾ‍ಪಕ, ಬಿಲ್ಡರ್ ಮನೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 3:19 IST
Last Updated 23 ಸೆಪ್ಟೆಂಬರ್ 2020, 3:19 IST
ಎಸಿಬಿ
ಎಸಿಬಿ   

ಬೆಂಗಳೂರು: ಕೆಂಗೇರಿ ಹೋಬಳಿ ಬಿ.ಎಂ. ಕಾವಲು ಗ್ರಾಮ ವ್ಯಾಪ್ತಿಯ ಕೋಟ್ಯಾಂಟರ ರೂಪಾಯಿ ಬೆಲೆ ಬಾಳುವ 18 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಪಾಲು ಮಾಡಿರುವ ಆರೋಪದಲ್ಲಿ ಭೂ ಮಾಪಕ ಮತ್ತು ಬಿಲ್ಡರ್ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.

ಭೂಮಾಪಕ ಉಮೇಶ್ ಮತ್ತು ಬಿಲ್ಡರ್ ಕಿಶೋರ್‌ಕುಮಾರ್ ಎಂಬುವರ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಬಿ.ಎಂ. ಕಾವಲು ಸರ್ವೆ ನಂಬರ್ 3ರಲ್ಲಿದ್ದ 18 ಎಕರೆ ಜಾಗ ಮೂಲತಃ ಸರ್ಕಾರಿ ಜಮೀನಾಗಿದ್ದು, ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಪೋಡಿ ಮತ್ತು ದುರಸ್ತಿ ಮಾಡಿಕೊಡಲಾಗಿದೆ. ಭೂ ಮಾಪಕರು ಅಧಿಕಾರ ದುರುಪಯೋಗ ಮಾಡಿಕೊಂಡು ಈ ಕೆಲಸ ಮಾಡಿದ್ದಾರೆ’ ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕರು ನೀಡಿದ್ದ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.