ADVERTISEMENT

₹7 ಲಕ್ಷ ಲಂಚ: ಎಸಿಬಿ ಬಲೆಗೆ ತಹಶೀಲ್ದಾರ್, ಶಿರಸ್ತೇದಾರ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 18:59 IST
Last Updated 6 ಅಕ್ಟೋಬರ್ 2020, 18:59 IST
ಲಕ್ಷ್ಮಿ
ಲಕ್ಷ್ಮಿ   

ಬೆಂಗಳೂರು: ಜಮೀನಿನ ಖಾತೆ ವರ್ಗಾವಣೆಗೆ ₹7 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಶೀಲ್ದಾರ್, ಶಿರಸ್ತೇದಾರ್ ಸೇರಿ ಮೂವರನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

2 ಎಕರೆ ಜಮೀನು ಖರೀದಿಸಿದ್ದ ಬೇಗೂರು ಗ್ರಾಮದ ನಿವಾಸಿಯೊಬ್ಬರು ದಾಖಲೆಗಳು ಸರಿ ಇಲ್ಲದ ಕಾರಣ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರಿಗೇ ಭೂಮಿ ಸೇರಬೇಕು ಎಂಬ ಆದೇಶ ಬಂದಿದ್ದು, ಅಷ್ಟರಲ್ಲಿ ದೂರುದಾರರು ಮೃತಪಟ್ಟಿದ್ದರು.

‘ಅವರ ಮಕ್ಕಳ ಹೆಸರಿಗೆ ಖಾತೆ ವರ್ಗಾಯಿಸಿಕೊಡಲು ವಿಶೇಷ ತಹಶೀಲ್ದಾರ್ ಲಕ್ಷ್ಮಿ ಮತ್ತು ಶಿರಸ್ತೇದಾರ್ ಆರ್.ಆರ್. ಪ್ರಸನ್ನಕುಮಾರ್ ₹7 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಕ್ಷ್ಮೀ ಪರವಾಗಿ ಉಷಾ ಎಂಬುವರು ₹5 ಲಕ್ಷ ಮತ್ತು ಪ್ರಸನ್ನಕುಮಾರ್ ₹2 ಲಕ್ಷ ಪಡೆಯುವಾಗ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.