
ಪ್ರಜಾವಾಣಿ ವಾರ್ತೆಬೆಂಗಳೂರು: ವಸತಿ ಗೃಹಗಳಿಗೆ ಸರಬರಾಜು ಮಾಡಿದ ಪೀಠೋಪಕರಣದ ಬಿಲ್ ಪಾವತಿಗೆ ₹15 ಸಾವಿರ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಕೇಂದ್ರ ಕಚೇರಿಯ ಉಪ ಆಯುಕ್ತರ ಆಡಳಿತ ವಿಭಾಗದಲ್ಲಿನ ಪ್ರಥಮ ದರ್ಜೆ ಸಹಾಯಕ ಎಚ್.ರಾಜು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದಿದ್ದಾರೆ.
ತಾವರೆಕೆರೆಯಲ್ಲಿನ ವಸತಿ ಗೃಹಕ್ಕೆ ಶೇಷಾದ್ರಿಪುರದ ನಿವಾಸಿಯೊಬ್ಬರು ಪೀಠೋಪಕರಣ ಸರಬರಾಜು ಮಾಡಿದ್ದರು. ಅದರ ಬಾಕಿ ಬಿಲ್ ಪಾವತಿಗೆ ರಾಜು ಲಂಚ ಪಡೆಯುವಾಗ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.