ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 35 ವರ್ಷದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆರು ಮಂದಿಗೆ ಬೆಳಕಾಗಿದ್ದಾರೆ.
ಕುಣಿಗಲ್‌ನ ನಿವಾಸಿಯಾದ ಯುವಕ ನಗರದ ಸುಂಕದಕಟ್ಟೆ ಬಳಿ ಬೈಕಿನಿಂದ ಬಿದ್ದು, ಗಾಯಗೊಂಡಿದ್ದರು. ಮಿದುಳಿಗೆ ತೀವ್ರ ಹಾನಿಯಾಗಿತ್ತು. ತುರ್ತು ಚಿಕಿತ್ಸೆಗೆ ಬಿಆರ್ ಲೈಫ್ ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಿಸದ ಪರಿಣಾಮ ವ್ಯಕ್ತಿಯ ಮಿದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದ ವೈದ್ಯರು, ಕುಟುಂಬದ ಸದಸ್ಯರಿಗೆ ಅಂಗಾಂಗ ದಾನದ ಮಹತ್ವ ತಿಳಿಸಿ, ಸಮ್ಮತಿ ಪಡೆದುಕೊಂಡರು.
ವ್ಯಕ್ತಿಯಯಕೃತ್ತು, ಮೂತ್ರಪಿಂಡಗಳು, ಶ್ವಾಸಕೋಶಗಳು, ಹೃದಯದ ಕವಾಟ ಹಾಗೂ ಕಣ್ಣು ಗುಡ್ಡೆಯನ್ನು ದಾನ ಪಡೆದಿದ್ದು, ಅಂಗಾಂಗಗಳಿಗೆ ಎದುರು ನೋಡುತ್ತಿದ್ದಆರು ಮಂದಿಗೆ ವೈದ್ಯರು ಕಸಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.