ADVERTISEMENT

6 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಶ್ವಾಕ್‌ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 20:16 IST
Last Updated 29 ಮಾರ್ಚ್ 2023, 20:16 IST
ಅಶ್ವಾಕ್‌ ಅಹಮ್ಮದ್
ಅಶ್ವಾಕ್‌ ಅಹಮ್ಮದ್   

ಬೆಂಗಳೂರು: ಕೃಷಿ ಜಮೀನಿನಲ್ಲಿ ಅಕ್ರಮವಾಗಿ ನಿವೇಶನ ಮಾಡಿ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸಿ ಆರು ವರ್ಷಗಳಿಂದ ತಲೆಮರೆ ಸಿಕೊಂಡಿದ್ದ ಗ್ರಾನಿಟಿ ಪ್ರಾಪರ್ಟೀಸ್‌ ಸಂಸ್ಥೆ ಮಾಲೀಕ ಅಶ್ವಾಕ್‌ ಅಹಮ್ಮದ್ ಎಂಬಾತನನ್ನು ಸಿಸಿಬಿ ಪೊಲೀಸರ ವಿಶೇಷ ತಂಡವು ಬಂಧಿಸಿದೆ.

ಆರೋಪಿ ಈ ಹಿಂದೆ 3 ವರ್ಷಗಳ ಕಾಲ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 2016ರಲ್ಲಿ ಮತ್ತೆ ಈತನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಅದಾದ ಮೇಲೆ ಆರೋಪಿಯು ಜಾಮೀನು ಪಡೆದುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ಹೊಸಕೋಟೆಯ ಬಳಿ 2009 ಹಾಗೂ 2010ರಲ್ಲಿ ಅಶ್ವಾಕ್‌ ಅಹಮ್ಮದ್‌ ನಿವೇಶನಗಳನ್ನು ಮೋಸದಿಂದ ಮಾರಾಟ ಮಾಡಿ ಸಾರ್ವಜನಿಕರಿಗೆ ವಂಚಿಸಿದ್ದ. ಪೊಲೀಸ್‌ ತನಿಖೆಯಿಂದ ಕೋಟ್ಯಂತರ ರೂಪಾಯಿ ವಂಚಿಸಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ರಾಮಮೂರ್ತಿ ನಗರ, ಇಂದಿರಾನಗರ, ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಮಾಲೀಕ ಅಶ್ವಾಕ್‌ ಅಹಮ್ಮದ್‌ ವಿರುದ್ಧ 108 ಪ್ರಕರಣಗಳು ದಾಖಲಾಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.