ADVERTISEMENT

ನಟ ದ್ವಾರಕೀಶ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 19:59 IST
Last Updated 25 ನವೆಂಬರ್ 2022, 19:59 IST
ದ್ವಾರಕೀಶ್
ದ್ವಾರಕೀಶ್   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಈ ಬಾರಿ ಮೂವರಿಗೆಗೌರವಡಾಕ್ಟರೇಟ್‌ ನೀಡಲು ನಿರ್ಧರಿಸಿದೆ.

ಚಿತ್ರನಟ ಬಿ.ಎಸ್‌. ದ್ವಾರಕೀಶ್‌, ಕಲಾವಿದ ಡಾ.ಟಿ. ಅನಿಲ್‌ ಕುಮಾರ್‌ ಮತ್ತು ಅಮೆರಿಕದ ಕನ್ನಡ ಕೂಟಗಳ ಸಂಘಟನೆ (ಅಕ್ಕ) ಅಧ್ಯಕ್ಷ ಅಮರನಾಥ್‌ ಗೌಡ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಲು ನಿರ್ಧರಿಸಲಾಗಿದೆ.

ಡಿ.5ರಂದು ನಡೆಯಲಿರುವ ವಿಶ್ವವಿದ್ಯಾಲಯದ 57ನೇ ವಾರ್ಷಿಕ ಘಟಿಕೋತ್ಸವದಲ್ಲಿಗೌರವಡಾಕ್ಟರೇಟ್‌ ಪ್ರದಾನ ಮಾಡಲಾಗುವುದು. ಯುಜಿಸಿ ಮುಖ್ಯಸ್ಥ ಪ್ರೊ. ಎಂ. ಜಗದೇಶ್‌ ಕುಮಾರ್‌ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.